ರಾಷ್ಟ್ರೀಯ

ಪ್ರೀತಿಸಿದ ಪ್ರೇಯಸಿಯನ್ನು ಗಂಡ ಮದುವೆಯಾಗಲು ಮೂರು ವರ್ಷದ ಸಂಬಂಧವನ್ನೇ ತ್ಯಾಗಮಾಡಿದ ಪತ್ನಿ !

Pinterest LinkedIn Tumblr

ಪ್ರೀತಿ-ಪ್ರೇಮಕ್ಕೆ ಜಗತ್ತಿನಲ್ಲಿ ಏನಲ್ಲ ಸರ್ಕಸ್ ನಡೆಯುತ್ತದೆ. ಪ್ರೀತಿಗಾಗಿ ತ್ಯಾಗ, ಬಲಿದಾನವೇ ನಡೆದಿರುವುದನ್ನು ನಾವೆಲ್ಲಾ ಕಂಡಿದ್ದೇವೆ…ಕೇಳಿದ್ದೇವೆ. ಆದರೆ ಇಲ್ಲೊಂದು ಘಟನೆಯಲ್ಲಿ ಮೂರು ವರ್ಷದ ಸಂಬಂಧವನ್ನೇ ತ್ಯಾಗಮಾಡಿದ ಪತ್ನಿಯೊಬ್ಬಳು ತನ್ನ ಗಂಡ ಪ್ರೀತಿಸುತ್ತಿದ್ದ ಯುವತಿಯೊಂದಿಗೆ ಮದುವೆಯಾಗಲು ವಿಚ್ಛೇದನ ನೀಡಿ, ತ್ಯಾಗಮಯಿ ಏನಿಸಿಕೊಂಡಿದ್ದಾಳೆ.

ಅಷ್ಟಕ್ಕೂ ಈ ನೈಜ ಘಟನೆ ನಡೆದಿರುವುದು ಎಲ್ಲಿ ಗೊತ್ತಾ? ಭೋಪಾಲ್​ನಲ್ಲಿ ಈ ಘಟನೆ ನಡೆದಿದೆ. ದಂಪತಿಗಳು ವಿವಾಹವಾಗಿ 3 ವರ್ಷ ಕಳೆದಿದೆ. ಆದರೆ ಗಂಡನಿಗೆ ಮದುವೆಗೂ ಮುನ್ನ ಬೇರೊಬ್ಬಳೊಂದಿಗೆ ಪ್ರೀತಿ ಇತ್ತು. ಆದರೆ ಯಾವುದೋ ಒಂದು ಕಾರಣಕ್ಕೆ ಪ್ರೀತಿಸಿದ ಯುವತಿಯೊಂದಿಗೆ ವಿವಾಹವಾಗಲಿಲ್ಲ. ಬದಲಾಗಿ ಬೇರೊಬ್ಬ ಯುವತಿಯೊಂದಿಗೆ ವಿವಾಹವಾಯಿತು.

ವಿವಾಹವಾದ ನಂತರವೂ ಆತ ಪ್ರಿಯತಮೆಯನ್ನು ಪ್ರೀತಿಸುತ್ತಿದ್ದ, ಜೊತೆಗೆ ಹೆಂಡತಿಯನ್ನು ಕೂಡ ಅಷ್ಟೇ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಒಂದು ದಿನ ಆತ ತನ್ನ ಪ್ರೀತಿ ಮತ್ತು ಮದುವೆ ಮುನ್ನ ಪ್ರೀತಿಸುತ್ತಿದ್ದ ಪ್ರೇಯಸಿ ಬಗ್ಗೆ ತನ್ನ ಪತ್ನಿ ಹೇಳಿಕೊಳ್ಳುತ್ತಾನೆ. ಆಕೆಯನ್ನು ಕೂಡ ನಿನ್ನೊಂದಿಗೆ ಪತ್ನಿಯನ್ನಾಗಿ ಸ್ವೀಕರಿಸಬೇಕು ಎಂಬ ಆಸೆಯನ್ನು ವ್ಯಕ್ತಪಡಿಸುತ್ತಾನೆ.

ಆದರೆ ಇಬ್ಬರನ್ನು ವಿವಾಹವಾಗಲು ಕಾನೂನಿನಲ್ಲಿ ಅವಕಾಶವಿಲ್ಲ. ಹಾಗಾಗಿ ಗಂಡನಿಗೆ ಇದರಿಂದ ನಿರಾಶೆಯಾಗುವುದು ಬೇಡವೆಂದು ವಿಚ್ಛೇದನ ನೀಡುವ ಮೂಲಕ ಪತ್ನಿ ತ್ಯಾಗಮಯಿಯಾಗಿದ್ದಾಳೆ. ಅಷ್ಟು ಮಾತ್ರವಲ್ಲ. ಪ್ರೀಯತಮೆಯ ಜೊತೆಗೆ ಚೆನ್ನಾಗಿ ಬಾಳಿರಿ ಎಂದು ಪತ್ನಿಗೆ ಹರಸಿದ್ದಾಳೆ.

ಈ ಘಟನೆಯ ಕುರಿತಾಗಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಕೀಲರೊಬ್ಬರು ಈ ಪ್ರಕರಣ ಕುರಿತಾಗಿ ಮಾತನಾಡಿದ್ದಾರೆ. ಅನೇಕರು ವಿಡಿಯೋ ನೋಡಿ ಇಂತಹ ಹೆಂಡತಿ ಎಲ್ಲರಿಗೆ ಸಿಗುವುದಿಲ್ಲ ಎಂದು ಕಾಮೆಂಟ್​ ಬರೆದಿದ್ದಾರೆ.

Comments are closed.