ರಾಷ್ಟ್ರೀಯ

ಬಿಜೆಪಿ ಹಿರಿಯ ನಾಯಕ ಕೈಲಾಶ್ ಸಾರಂಗ್ ವಿಧಿವಶ

Pinterest LinkedIn Tumblr

ಮಧ್ಯಪ್ರದೇಶ: ಮಧ್ಯಪ್ರದೇಶದ ಹಿರಿಯ ಬಿಜೆಪಿ ನಾಯಕ ಕೈಲಾಶ್​ ಸಾರಂಗ್ (85) ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು ಶನಿವಾರ ರಾತ್ರಿ ಮುಂಬೈ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಕಳೆದ 12 ದಿನಗಳ ಹಿಂದೆ ಕೈಲಾಶ್​ ಸಾರಂಗ್ ಅವರನ್ನು ಮುಂಬೈನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗಿದೇ ನಿನ್ನೆ ರಾತ್ರಿ ವಿಧಿವಶರಾಗಿದ್ದಾರೆ.

ಕೈಲಾಶ್​ ಸಾರಂಗ್ ಅವರ ಸಾವಿಗೆ ಟ್ವೀಟ್ ಮೂಲಕ ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಮಧ್ಯಪ್ರದೇಶದಲ್ಲಿ ಬಿಜೆಪಿ ಬಲವರ್ಧನೆಗೆ ಕೈಲಾಶ್​ ಸಾರಂಗ್​ ಜೀ ಅವರು ಶ್ರಮ ವಹಿಸಿದ್ದರು. ಮಧ್ಯಪ್ರದೇಶದ ಏಳಿಗೆಗೆ ಸದಾದುಡಿಯುತ್ತಿದ್ದ ಮತ್ತು ಕಠಿಣ ಕೆಲಸ ಮಾಡುವ ನಾಯಕರಾಗಿಯೇ ನಮ್ಮ ನಡುವೆ ಇರಲಿದ್ದಾರೆ ಎಂದು ಹೇಳಿದ್ದಾರೆ.

 

Comments are closed.