ನವದೆಹಲಿ: ವ್ಯಾಪಾರಕ್ಕೆಂದು ಪಾಕಿಸ್ತಾನಕ್ಕೆ ಹೋಗಿದ್ದ ವ್ಯಕ್ತಿಯೊಬ್ಬರನ್ನು ಪಾಕ್ ಬೇಹುಗಾರಿಕೆ ಆರೋಪದಲ್ಲಿ 28 ವರ್ಷಗಳ ಕಾಲ ಜೈಲಿನಲ್ಲಿಟ್ಟಿದ್ದು, ಇದೀಗ ಆ ವ್ಯಕ್ತಿ ಕೊನೆಗೂ ಬಿಡುಗಡೆಯಾಗಿ ಭಾರತಕ್ಕೆ ಬಂದಿದ್ದಾರೆ.
ಶಂಶುದ್ದೀನ್ ಎಂಬಾತನೇ ಶಿಕ್ಷೆಯಿಂದ ಬಿಡುಗಡೆಯಾಗಿ ಭಾರತಕ್ಕೆ ವಾಪಾಸಾದ ವ್ಯಕ್ತಿ. 28 ವರ್ಷಗಳ ಕಾಲ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ಬಳಿಕ ಕಾನ್ಪುರದ ಶಂಶುದ್ದೀನ್ ಭಾರತಕ್ಕೆ ಹಿಂದಿರುಗಿದ್ದಾರೆ.
71 ವರ್ಷ ಪ್ರಾಯದ ಶಂಶುದ್ದೀನ್ 28 ವರ್ಷಗಳ ಬಳಿಕ ತಮ್ಮ ಕುಟುಂಬವನ್ನು ಸೇರಿದ್ದಾರೆ. ಭಾನುವಾರ ಉತ್ತರ ಪ್ರದೇಶದ ಕಾನ್ಪುರದ ತಮ್ಮ ಮನೆಗೆ ಅವರು ಮರಳಿದ್ದಾರೆ.
ಶಂಶುದ್ದೀನ್ ತಮ್ಮ ದುಃಖತಪ್ತ ಹೆಣ್ಣುಮಕ್ಕಳನ್ನು ಹಾಗೂ ತಮ್ಮ 70 ವರ್ಷದ ಸಹೋದರಿಯನ್ನು ಆಲಿಂಗಿಸಿದರು. ಅವರು ವಾಸಿಸುತ್ತಿದ್ದ ಇಡೀ ಪ್ರದೇಶದಲ್ಲಿ ದೀಪಾವಳಿಯ ಮಾದರಿಯ ಸಂಭ್ರಮ ಮನೆಮಾಡಿತ್ತು.
Comments are closed.