2015ರಲ್ಲಿ ಕಿರಿಯ ವಯಸ್ಸಿನಲ್ಲಿಯೇ ಐಎಎಸ್ ಟಾಪರ್ ಆಗಿ ಹೊರಹೊಮ್ಮಿದ ಟೀನಾ ಡಾಬಿ ಇಡೀ ದೇಶದ ಗಮನ ಸೆಳೆದಿದ್ದರು. ಐಎಎಸ್ ಟಾಪರ್ ಆದ ಮೊದಲ ದಲಿತ ಮಹಿಳೆ ಎಂಬ ಹೆಗ್ಗಳಿಕೆ ಕೂಡ ಟೀನಾ ಅವರಾದಗಿದೆ. ಇದಾದ ಬಳಿಕ ಮದುವೆ ತಮ್ಮ ಬ್ಯಾಚಿನ ಎರಡನೇ ಟಾಪರ್ ಆಗಿದ್ದ ಕಾಶ್ಮೀರಿ ಮುಸ್ಲಿಂ ಅಥರ್ ಅಮರ್ ಉಲ್ ಶಫಿ ಖಾನ್ ಅವರನ್ನು ಮದುವೆಯಾಗುವ ಮೂಲಕ ಸುದ್ದಿಯಾಗಿದ್ದರು.
ಅಥರ್ 2015ನೇ ಬ್ಯಾಚಿನ ಎರಡನೇ ಟಾಪರ್ ಆಗಿದ್ದು, ಮಸ್ಸೂರಿಯಲ್ಲಿ ತರಬೇತಿ ವೇಳೆ ಇವರಿಬ್ಬರಾಗಿದ್ದರು. 2019ರಲ್ಲಿ ಮದುವೆಯಾದ ಈ ಜೋಡಿಗೆ ವಿವಾಹವೂ ಸುದ್ದಿಯಾಗಿತ್ತು. ಮೂರು ಆರತಕ್ಷತೆ ಮೂಲಕ ಅದ್ಧೂರಿ ವಿವಾಹವಾಗಿದ್ದ ಈ ಜೋಡಿಯ ಮದುವೆಗೆ ರಾಜಕೀಯ ಗಣ್ಯರಾದ ವೆಂಕಯ್ಯ ನಾಯ್ಡು, ಸುಮಿತ್ರಾ ಮಹಾಜನ್, ರವಿಶಂಕರ್ ಸೇರಿ ಅನೇಕರು ಭಾಗಿಯಾಗಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಇವರ ಹೊಸ ಜೀವನಕ್ಕೆ ಟ್ವೀಟ್ ಮೂಲಕ ಶುಭ ಕೋರಿದ್ದರು.
ರಾಜಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಜೋಡಿ ಜೈಪುರದಲ್ಲಿ ಮೊದಲು ಸರಳವಾಗಿ ನ್ಯಾಯಾಲಯದಲ್ಲಿ ವಿವಾಹವಾಗಿದ್ದರು. ಬಳಿಕ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ಬಳಿಕ ದೆಹಲಿಯಲ್ಲಿ ಅದ್ಧೂರಿ ಆರತಕ್ಷತೆ ನಡೆದಿತ್ತು. ಈ ಮದುವೆ ಕೋಮು ಸೌಹರ್ದತೆಯ ಸಂಕೇತ ಎಂದು ಅನೇಕರು ಪ್ರಶಂಸಿದ್ದರು. ಇದರ ಜೊತೆಗೆ ಇದೊಂದು ಲವ್ ಜಿಹಾದ್ ಎಂಬ ಟೀಕೆಕೂಡ ವ್ಯಕ್ತವಾಗಿತ್ತು.
ಟೀನಾ ಅಂತರ್ಧರ್ಮೀಯ ಮದುವೆಯಾದ ಕುರಿತು ಅನೇಕ ಬಲಪಂಥೀಯ ಸಂಘಟನೆಗಳು ಅಲ್ಲದೇ ಭಾರತೀಯ ಹಿಂದೂ ಮಹಾಸಭಾ ಟೀಕಿಸಿತ್ತು. ಇದೊಂದು ಲವ್ ಜಿಹಾದ್ ಆಗಿದ್ದು, ಈ ಮದುವೆಯನ್ನು ನಿಲ್ಲಿಸಬೇಕು ಎಂದು ಹಿಂದೂ ಮಹಾಸಭಾ ಟೀನಾ ಪೋಷಕರಿಗೆ ಪತ್ರವನ್ನು ಬರೆದಿತ್ತು. ಆದರೆ, ಈ ನಿರ್ಧಾರ ನಮ್ಮ ಮಗಳದು. ಆಕೆ ತಮ್ಮ ಜೀವನದ ನಿರ್ಧರ ತೆಗೆದುಕೊಳ್ಳಲು ಸ್ವತಂತ್ರಳು ಎಂದು ಟೀನಾ ಪೋಷಕರು ಸ್ಪಷ್ಟಪಡಿಸಿದ್ದರು.
ಮದುವೆಯ ನಿರ್ಧಾರ, ಸಾಧನೆ, ವೃತ್ತಿ ಬದುಕಿನಲ್ಲಿ ಅನೇಕರಿಗೆ ಆದರ್ಶವಾಗಿದ್ದ ಈ ಜೋಡಿ ಈಗ ತಮಗೆ ವಿಚ್ಛೇದನ ಬೇಕು ಎಂದು ಕೋರ್ಟ್ ಮೊರೆ ಹೋಗಿದ್ದಾರೆ. ಈ ಮೂಲಕ ಮತ್ತೆ ಟೀನಾ ಹೆಸರು ಸುದ್ದಿಯಾಗಿದೆ.
Comments are closed.