ರಾಷ್ಟ್ರೀಯ

ಚೌರಿ ಚೌರಾ ಘಟನೆಯ ಶತಮಾನೋತ್ಸವವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

Pinterest LinkedIn Tumblr

ನವದೆಹಲಿ: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಹೆಗ್ಗುರುತಾಗಿರುವ ಐತಿಹಾಸಿಕ ಚೌರಿ ಚೌರಾ ಘಟನೆ ನಡೆದು ಇಂದಿಗೆ ನೂರು ವರ್ಷ. ಈ ಸಂದರ್ಭದಲ್ಲಿ ಚೌರಿ ಚೌರಾ ಘಟನೆಯ ಶತಮಾನೋತ್ಸವವನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಅಲ್ಲದೆ ಶತಮಾನೋತ್ಸವದ ಪ್ರಾರಂಭವನ್ನು ಗುರುತಿಸಲು ವಿಶೇಷ ಅಂಚೆ ಚೀಟಿಯನ್ನು ಸಹ ಬಿಡುಗಡೆ ಮಾಡಿದರು.

“ಚೌರಿ ಚೌರಾ ಘಟನೆಯ ಹುತಾತ್ಮರನ್ನು ಕುರಿತು ಹೆಚ್ಚು ಚರ್ಚೆಗಳಾಗಿಲ್ಲ ಎನ್ನುವುದು ದುರದೃಷ್ಟಕರ. ಅವರಿಗೆ ಇತಿಹಾಸದ ಪುಟಗಳಲ್ಲಿ ಮಹತ್ವ ನೀಡಲಾಗಿಲ್ಲ ಆದರೆ ಅವರ ರಕ್ತವು ದೇಶದ ಮಣ್ಣಿನಲ್ಲಿ ಬೆರೆತಿದೆ, ನಮಗೆ ಸ್ಫೂರ್ತಿ ನೀಡುತ್ತಿದೆ.” ಪ್ರಧಾನಿ ಮೋದಿ ಹೇಳೀದ್ದಾರೆ.

“ಚೌರಿ ಚೌರಾ ಘಟನೆಯು ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವುದಕ್ಕೆ ಸೀಮಿತವಾಗಿರಲಿಲ್ಲ, ಈ ಘಟನೆಯ ಸಂದೇಶ ಬಹಳ ದೊಡ್ಡದಾಗಿದೆ. ವಿವಿಧ ಕಾರಣಗಳಿಂದಾಗಿ ಇದನ್ನು ಸಣ್ಣ ಘಟನೆ ಎಂದು ಪರಿಗಣಿಸಲಾಯಿತು. ಆದರೆ ನಾವು ಅದನ್ನು ಸಂದರ್ಭಕ್ಕೆ ತಕ್ಕಂತೆ ನೋಡಬೇಕು.ಬೆಂಕಿ ಕೇವಲ ಪೋಲೀಸ್ ಠಾಣೆಯ ಒಳಗೆ ಮಾತ್ರವೇ ಇದ್ದದ್ದಲ್ಲ ಜನರ ಹೃದಯದಲ್ಲಿತ್ತು.

“ದೇಶದ ಪ್ರಗತಿಯ ಹಿಂದೆ ರೈತರ ಪರಿಶ್ರರಮವಿದೆ. ಚೌರಿ ಚೌರಾ ಹೋರಾಟದಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಕಳೆದ ಆರು ವರ್ಷಗಳಲ್ಲಿ ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದರ ಪರಿಣಾಮವಾಗಿ ಕೊರೋನಾ ಸಾಂಕ್ರಾಮಿಕದ ನಡುವೆಯೂ ಕೃಷಿ ಕ್ಷೇತ್ರ ಬೆಳವಣಿಗೆ ಸಾಧಿಸಿದೆ.

“ರೈತರ ಹಿತದೃಷ್ಟಿಯಿಂದ ನಾವು ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. ರೈತರಿಗೆ ಲಾಭದಾಯಕವಾಗಿಸಲು, ಇನ್ನೂ 1,000 ಮಂಡಿಗಳನ್ನು e-NAMಗೆ ಜೋಡಿಸಲಾಗುವುದು.

“ದೇಶದ ಏಕತೆ ನಮ್ಮ ಆದ್ಯತೆ ಮತ್ತು ಅಂತಹಾ ಏಕತೆಗೆ ಎಲ್ಲಕ್ಕಿಂತ ಹೆಚ್ಚಿನ ಗೌರವ ನೀಡುವೆವೆಂದು ನಾವು ಪ್ರತಿಜ್ಞೆ ಮಾಡಬೇಕು. ಈ ಭಾವನೆಯೊಂದಿಗೆ, ನಾವು ಭಾರತದ ಪ್ರತಿಯೊಬ್ಬ ಜನರೊಂದಿಗೆ ಮುಂದುವರಿಯಬೇಕಾಗಿದೆ. ” ಪ್ರಧಾನಿ ಮೋದಿ ಹೇಳಿದ್ದಾರೆ/

1922 ರಲ್ಲಿ ಮಹಾತ್ಮ ಗಾಂಧಿ ಪ್ರಾರಂಭಿಸಿದ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ ಸ್ವಾತಂತ್ರ್ಯ ಹೋರಾಟಗಾರರ ಗುಂಪಿನ ಮೇಲೆ ಪೋಲೀಸರು ಗುಂಡು ಹಾರಿಸಿದ್ದರು., ಅವರಲ್ಲಿ ಅನೇಕರು ಸಾವನ್ನಪ್ಪಿದರು. ಇದಕ್ಕೆ ಪ್ರತೀಕಾರವಾಗಿ, ಪ್ರತಿಭಟನಾಕಾರರು ಚೌರಿ ಚೌರಾ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿ,ಅನೇಕರನ್ನು ಕೊಂದರು, ಗಾಯಗೊಳಿಸಿದರು. ಈ ಪ್ರಕಾರವಾಗಿ ಹಿಂಸಾ ಸ್ವರೂಪ ತಳೆದ ಅಸಹಕಾರ ಚಳವಳಿಯನ್ನು ಮಹಾತ್ಮ ಗಾಂಧಿ ಕೈಬಿಟ್ಟರು.

Comments are closed.