ರಾಷ್ಟ್ರೀಯ

ಔಷಧಿ ಮೇಲಿನ 6 ಕೋಟಿ ರೂ. ತೆರಿಗೆಯನ್ನು ಮನ್ನಾ ಮಾಡಿ 5 ತಿಂಗಳ ಟೀರಾಳ ಜೀವ ಉಳಿಸಲು ಮುಂದಾಗಿರುವ ಮೋದಿ

Pinterest LinkedIn Tumblr

ಮುಂಬೈ: ಜೀವನ್ಮರಣ ಹೋರಾಟ ನಡೆಸುತ್ತಿರುವ ಐದು ತಿಂಗಳ ಟೀರಾ ಕಾಮತ್‌ಳ ಜೀವ ಉಳಿಸುವ ಔಷಧಿ ಆಮದಿನ ಮೇಲಿನ ತೆರಿಗೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮನ್ನಾ ಮಾಡಿದ್ದು ಈ ನಿರ್ಧಾರ ಮಗುವಿನ ಪೋಷಕರಿಗೆ ಹೊಸ ಆಶಾಕಿರಣ ಮೂಡಿಸಿದೆ.

ಅಪರೂಪದ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿರುವ ಟೀರಾ ಕಾಮತ್ ಗೆ 16 ಕೋಟಿ ರೂ. ಮೌಲ್ಯದ ಔಷಧಿಯನ್ನು ಆಮದು ಮಾಡಿಕೊಳ್ಳುತ್ತಿದ್ದು ಇದರ ಮೇಲಿನ 6 ಕೋಟಿ ರೂ.ಗಳ ಜಿಎಸ್ಟಿ ಮೊತ್ತವನ್ನು ಪಿಎಂ ಮೋದಿ ಮನ್ನಾ ಮಾಡಿದ್ದಾರೆ.

ಟೀರಾ ಪೋಷಕರು ಜೀನ್ ಬದಲಿ ಚಿಕಿತ್ಸೆಯಿಂದ ಗುಣಪಡಿಸಬಹುದಾದ ಔಷಧಿಯನ್ನು ಕ್ರೌಡ್-ಫಂಡಿಂಗ್ ಮೂಲಕ 16 ಕೋಟಿ ರೂಪಾಯಿಯನ್ನು ಸಂಗ್ರಹಿಸಿದ್ದರು. ಇನ್ನು ಈ ಔಷಧಿಯನ್ನು ಅಮೆರಿಕಾದಿಂದ ಆಮದು ಮಾಡಿಕೊಳ್ಳಬೇಕಾಗಿತ್ತು. ಇದಕ್ಕಾಗಿ ಆಮದು ಸುಂಕವನ್ನು ಪಾವತಿ ಮಾಡಬೇಕಾಗಿತ್ತು.

ಇದಕ್ಕಾಗಿ ಪ್ರತಿಪಕ್ಷದ ನಾಯಕ ಮತ್ತು ಬಿಜೆಪಿ ಶಾಸಕ ದೇವೇಂದ್ರ ಫಡ್ನವೀಸ್ ಅವರು ಪ್ರಧಾನಿ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಟೀರಾ ಕಾಮತ್ ಪೋಷಕರು ಪತ್ರ ಬರೆದು ಔಷಧಿಗಳ ಆಮದಿಗೆ ಅನ್ವಯವಾಗುವ ಎಲ್ಲ ತೆರಿಗೆಗಳನ್ನು ವಿನಾಯಿತಿ ನೀಡುವಂತೆ ಕೋರಿದ್ದರು.

ಇದೇ ವಿಷಯವಾಗಿ 6 ಕೋಟಿ ರೂ. ಆಮದು ಸುಂಕವನ್ನು ಕಡಿತ ಮಾಡಬೇಕು ಎಂದು ಫಡ್ನವೀಸ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಮೋದಿ ಅವರು ಆಮದು ಸುಂಕ ವಿನಾಯಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಮುಂಬೈ ನಿವಾಸಿಗಳಾದ ಪ್ರಿಯಾಂಕಾ ಮತ್ತು ಮಿಹಿರ್ ಕಾಮತ್ ಅವರು ಆಗಸ್ಟ್ 14, 2020 ರಂದು ಟೀರಾಗೆ ಜನ್ಮ ನೀಡಿದರು. ಟೀರಾ ಹುಟ್ಟಿದಾಗ ಲವಲವಿಕೆಯಿಂದಲೇ ಇದ್ದಳು. ಆದರೆ ಎರಡು ವಾರಗಳ ನಂತರ, ಟೀರಾ ಎದೆ ಹಾಲು ಕುಡಿಯಲು ತೊಂದರೆ ಅನುಭವಿಸಿದ್ದಳು. ಆಗ ಪೋಷಕರು ಮಕ್ಕಳ ವೈದ್ಯರ ಬಳಿಗೆ ಕರೆದೊಯ್ದಿದ್ದರು. ಆಗ ಮಗುವಿಗೆ ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ(ಎಸ್ಎಂಎ) ಕಾಯಿಲೆ ಇರುವುದನ್ನು ವೈದ್ಯುರ ಪತ್ತೆ ಹಚ್ಚಿದ್ದರು.

Comments are closed.