ರಾಷ್ಟ್ರೀಯ

ನನ್ನ ವಯೋವೃದ್ಧೆ ತಾಯಿ ಹೀರಾಬೆನ್ ಕೋವಿಡ್-19 ಲಸಿಕೆಯ ಪಡೆದುಕೊಂಡಿದ್ದಾರೆ; ಪ್ರತಿಯೊಬ್ಬ ಅರ್ಹ ಹಿರಿಯ ನಾಗರಿಕರು ಪಡೆಯಿರಿ: ಮೋದಿ

Pinterest LinkedIn Tumblr

ನವದೆಹಲಿ: 60 ವರ್ಷಕ್ಕಿಂತ ಮೇಲ್ಪಟ್ಟವರು, 45 ವರ್ಷಕ್ಕಿಂತ ಮೇಲೆ ಆರೋಗ್ಯ ಸಮಸ್ಯೆ ಹೊಂದಿರುವವರು ಕೋವಿಡ್-19 ಸಾಂಕ್ರಾಮಿಕ ಬರದಂತೆ ತಡೆಯಲು ಕಡ್ಡಾಯವಾಗಿ ಲಸಿಕೆ ಪಡೆಯುವಂತೆ ಕೇಂದ್ರ ಸರ್ಕಾರ ದೇಶದ ನಾಗರಿಕರಿಗೆ ಸೂಚನೆ ನೀಡಿದೆ.

ಆದರೆ ಕೆಲವರು ಲಸಿಕೆಯ ಬಗ್ಗೆ ಭಯದಿಂದ ಕೇಳಿಬರುತ್ತಿರುವ ಊಹಾಪೋಹಗಳಿಂದ ಹಿಂದೇಟು ಹಾಕುತ್ತಿದ್ದಾರೆ. ನಿರೀಕ್ಷಿತ ಮಟ್ಟದಲ್ಲಿ ಹಿರಿಯ ನಾಗರಿಕರು ಸ್ಪಂದಿಸುತ್ತಿಲ್ಲ.

ಈ ಬಗ್ಗೆ ಪ್ರಧಾನಿ ಮೋದಿ ಇಂದು ಟ್ವೀಟ್ ಮಾಡಿ, ನನ್ನ ತಾಯಿ ವಯೋವೃದ್ಧೆ ಹೀರಾಬೆನ್ ಇಂದು ಕೋವಿಡ್-19 ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ಪ್ರತಿಯೊಬ್ಬ ಅರ್ಹ ಹಿರಿಯ ನಾಗರಿಕರು ಲಸಿಕೆ ಪಡೆದು ಬೇರೆಯವರಿಗೆ ಮಾದರಿಯಾಗಿ ಪ್ರೋತ್ಸಾಹ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಹೀರಾಬೆನ್ ಮೋದಿಯವರಿಗೆ 99 ವರ್ಷವಾಗಿದ್ದು ಮುಂದಿನ ವರ್ಷಕ್ಕೆ ಶತಾಯುಷ್ಯಕ್ಕೆ ಕಾಲಿಡುತ್ತಿದ್ದಾರೆ.

Comments are closed.