ರಾಯಪುರ: ಅಪಹರಣ ಮಾಡಿದ್ದ ಕೋಬ್ರಾ ಕಮಾಂಡೋ ಒಬ್ಬರ ಭಾವಚಿತ್ರವನ್ನು ಮಾವೋವಾದಿಗಳ ತಂಡ ಬುಧವಾರ ಬಿಡುಗಡೆ ಮಾಡಿದೆ.
ಛತ್ತೀಸ್ಗಢದಲ್ಲಿ ದಾಳಿ ನಡೆಸಿದ ಸಂದರ್ಭದಲ್ಲಿ ಕೋಬ್ರಾದ ಕಮಾಂಡೋ ಒಬ್ಬರನ್ನು ಮಾವೋವಾದಿಗಳು ಅಪಹರಣ ಮಾಡಿದ್ದರು. ಬಳಿಕ ಈ ಕುರಿತು ಪತ್ರಕರ್ತರೊಬ್ಬರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಯೋಧನನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲು ಮಧ್ಯವರ್ತಿಯೊಬ್ಬರನ್ನು ಸರ್ಕಾರ ನೇಮಕ ಮಾಡಬೇಕೆಂದು ಹೇಳಿದ್ದರು.
ಯೋಧನ ಫೋಟೋವನ್ನು ಬಿಡುಗಡೆ ಮಾಡಿರುವ ಮಾವೋವಾದಿಗಳು ಯೋಧ ಸುರಕ್ಷಿತವಾಗಿದ್ದು, ನಾವು ಯಾವುದೇ ರೀತಿಯ ಹಲ್ಲೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಛತ್ತೀಸ್‌ಗಢದ ಸುಕ್ಮಾ ಹಾಗೂ ಬಿಜಾಪುರ ಜಿಲ್ಲೆಯ ಗಡಿಯ ಜೊನಗುಡ ಮತ್ತು ಟೆಕಲ್‌ಗುಡದ ಅರಣ್ಯ ಪ್ರದೇಶದಲ್ಲಿ ಶನಿವಾರ ಭದ್ರತಾ ಪಡೆಯ ಮೇಲೆ ನಕ್ಸಲರ ಗುಂಪು ಗುಂಡಿನ ದಾಳಿ ನಡೆಸಿದ ಪರಿಣಾಮ 22 ಯೋಧರು ಹುತಾತ್ಮರಾಗಿದ್ದರು.
Comments are closed.