ರಾಷ್ಟ್ರೀಯ

ಹೂಡಿಕೆದಾರರಿಗೆ 141 ಕೋಟಿ ವಂಚಿಸಿದ್ದಾರೆ ಎಂಬ ಆರೋಪ; ಕಿರುತೆರೆ ನಟ ಅನುಜ್ ಸಕ್ಸೇನಾ ಬಂಧನ

Pinterest LinkedIn Tumblr

ಮುಂಬೈ: ಕಿರುತೆರೆ ನಟ ಹಾಗೂ ಎಲ್ಡರ್ ಫಾರ್ಮಾಸ್ಯುಟಿಕಲ್ಸ್‌ನ ಸಿಒಒ ಅನುಜ್ ಸಕ್ಸೇನಾ ಮುಂಬೈ ಪೊಲೀಸರ ಅತಿಥಿಯಾಗಿದ್ದಾರೆ. ಮುಂಬೈ ಪೊಲೀಸ್ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ಗುರುವಾರ ಅನುಜ್ ಸಕ್ಸೇನಾ ಅವರನ್ನು ಬಂಧಿಸಿದೆ. ಹೂಡಿಕೆದಾರರಿಗೆ 141 ಕೋಟಿ ವಂಚಿಸಿದ್ದಾರೆ ಎಂಬ ದೂರಿಗೆ ಸಂಬಂಧಿಸಿದಂತೆ ಸಕ್ಸೇನಾ ಅವರನ್ನು ಬಂಧಿಸಲಾಗಿದೆ.

ಕಂಪನಿಯ ಸಿಒಒ ಆಗಿ ಅವರ ಪಾತ್ರದ ತನಿಖೆಗೆ ಇಒಡಬ್ಲ್ಯೂ ಅನುಜ್ ಸಕ್ಸೇನಾ ಅವರ ವಶಕ್ಕೆ ಮುಂದಾದಾಗ ಅವರು ತಾವೊಬ್ಬ ವೈದ್ಯಕೀಯ ಕಿಟ್‌ಗಳು ಮತ್ತು ಸ್ಯಾನಿಟೈಸರ್ಗಳನ್ನು ಉತ್ಪಾದಿಸುವ ಸುವ ಕಂಪನಿಯನ್ನು ಹೊಂದಿರುವವನು ಎಂದೂ ತನ್ನನ್ನು ವಶಕ್ಕೆ ಪಡೆಯುವುದು ಸರಿಯಲ್ಲವೆಂದು ವಿರೋಧಿಸಿದರು. ಸಿಒಒ ಆಗಿ ಸಕ್ಸೇನಾ ವಂಚನೆ ಮಾಡಿದ ಆರೋಪದ ಕುರಿತು ತಿಳುವಳಿಕೆ ಹೊಂದಿರಬಹುದು ಎಂಬ ಇಒಡಬ್ಲ್ಯೂ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿತು.

ಮೋಸ ಮತ್ತು ಕ್ರಿಮಿನಲ್ ಪಿತೂರಿ ಮತ್ತು ಮಹಾರಾಷ್ಟ್ರ ಪ್ರೊಟೆಕ್ಷನ್ ಆಫ್ ಇಂಟರೆಸ್ಟ್ ಆಫ್ ಡಿಪಾಸಿಟರ್ ಆಕ್ಟ್, 1999 ರ ವಿಭಾಗಗಳ ಮೇಲೆ ಸಕ್ಸೇನಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 2012 ರಲ್ಲಿ ಕಂಪನಿಯ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡಿದ್ದರೆ ಲಾಭದಾಯಕ ಆದಾಯವನ್ನು ಹೊಂದುವ ಭರವಸೆ ನೀಡಿದ್ದ ಸಕ್ಸೇನಾ ಅವರ ವಿರುದ್ಧ ಹೂಡಿಕೆದಾರರು ದೂರು ದಾಖಲಿಸಿದ್ದಾರೆ.

Comments are closed.