ರಾಷ್ಟ್ರೀಯ

ಕೋವಿಡ್ 19 ಸೋಂಕಿಗೆ ತುತ್ತಾಗಿದ್ದ ಅಪ್ಪಿಕೊ ಚಳವಳಿ ನೇತಾರ ಸುಂದರಲಾಲ್ ಬಹುಗುಣ ನಿಧನ

Pinterest LinkedIn Tumblr

ಪರಿಸರವಾದಿ ಹಾಗೂ ಅಪ್ಪಿಕೊ (ಚಿಪ್ಕೊ) ಚಳವಳಿಯ ನೇತಾರ ಸುಂದರಲಾಲ್ ಬಹುಗುಣ (94) ಅವರು ಶುಕ್ರವಾರ ವಿಧಿವಶರಾಗಿದ್ದಾರೆ. ಕೋವಿಡ್ 19 ಸೋಂಕಿಗೆ ತುತ್ತಾಗಿದ್ದ ಸುಂದರಲಾಲ್ ಬಹುಗುಣ ಅವರು ಮೇ 8ರಂದು ರಿಷಿಕೇಶದ ಏಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದರು. ಸ್ಥಳೀಯ ವರದಿಗಳ ಪ್ರಕಾರ ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದರು ಮತ್ತು ಮಧುಮೇಹವನ್ನು ಹೊಂದಿದ್ದರು. ಇದನ್ನು ಕೊರೋನಾ ವೈರಸ್ ಪ್ರಕರಣಗಳಲ್ಲಿ ಕೊಮೊರ್ಬಿಡಿಟಿ ಎಂದು ಪರಿಗಣಿಸಲಾಗುತ್ತದೆ.

ತಜ್ಞ ವೈದ್ಯರ ತಂಡ ಬಹುಗುಣ ಅವರಿಗೆ ಚಿಕಿತ್ಸೆ ನೀಡುತ್ತಿತ್ತು. ಎಲೆಕ್ಟ್ರೋಲೈಟ್‌ಗಳು ಮತ್ತು ಯಕೃತ್ತಿನ ಕಾರ್ಯವನ್ನು ಒಳಗೊಂಡಂತೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಲು ಮತ್ತು ಮೇಲ್ವಿಚಾರಣೆ ಮಾಡುತ್ತಿತ್ತು. ಅವರ ಪರೀಕ್ಷೆಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದು ಏಮ್ಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಹರೀಶ್ ಥಪ್ಲಿಯಲ್ ಗುರುವಾರ ತಿಳಿಸಿದ್ದರು. ಬಹುಗುಣ ಅವರು ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ ಎಂದು ದೈನಿಕ್ ಜಾಗರಣ್ ವರದಿ ಮಾಡಿದೆ. ಪರಿಸರವಾದಿಯ ಅಂತ್ಯಸಂಸ್ಕಾರ ರಿಷಿಕೇಶದ ಗಂಗೆಯಲ್ಲಿ ನಡೆಯಲಿದೆ.

ಸುಂದರಲಾಲ್​ ಬಹುಗುಣ ಅವರ ನಿಧನಕ್ಕೆ ಪ್ರಧಾನಿ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಸುಂದರ್‌ಲಾಲ್ ಬಹುಗುಣ ಜಿ ಅವರ ನಿಧನ ನಮ್ಮ ರಾಷ್ಟ್ರಕ್ಕೆ ಒಂದು ದೊಡ್ಡ ನಷ್ಟವಾಗಿದೆ. ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ನಮ್ಮ ಶತಮಾನಗಳ ಹಳೆಯ ನೀತಿಯನ್ನು ಅವರು ವ್ಯಕ್ತಪಡಿಸಿದರು. ಅವರ ಸರಳತೆ ಮತ್ತು ಸಹಾನುಭೂತಿಯ ಮನೋಭಾವವನ್ನು ಎಂದಿಗೂ ಮರೆಯಲಾಗುವುದಿಲ್ಲ. ಅವರ ಕುಟುಂಬ ವರ್ಗದವರಿಗೆ ಮತ್ತು ಅವರ ಅನೇಕ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ ಎಂದು ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

Comments are closed.