ರಾಷ್ಟ್ರೀಯ

ನಮ್ಮ ಪ್ರೀತಿ ಪಾತ್ರ ಎಷ್ಟೋ ಜನರ ಜೀವವನ್ನು ಈ ಕೊರೋನಾ ಬಲಿತೆಗೆದುಕೊಂಡು ಬಿಟ್ಟಿದೆ: ಗದ್ಗದಿತರಾದ ಪ್ರಧಾನಿ ನರೇಂದ್ರ ಮೋದಿ

Pinterest LinkedIn Tumblr

ನವದೆಹಲಿ: ಕಣ್ಣಿಗೆ ಕಾಣದ ಸೋಂಕಿಗೆ ಅದೆಷ್ಟು ಜನರ ಜೀವ ಕಳೆದುಕೊಂಡರು. ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರು ಕಂಗಾಲಾಗಿದ್ದಾರೆ. ನಮ್ಮ ಪ್ರೀತಿ ಪಾತ್ರ ಎಷ್ಟೋ ಜನರ ಜೀವವನ್ನು ಈ ಕೊರೋನಾ ಬಲಿತೆಗೆದುಕೊಂಡು ಬಿಟ್ಟಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಅಗಲಿದವರ ನೆನೆದು ಪ್ರಧಾನಿ ನರೇಂದ್ರ ಮೋದಿ ಅವರು ಭಾವಾನಾತ್ಮಕವಾದವರು.

ಸೋಂಕಿನ ನಿಯಂತ್ರಣಕ್ಕೆ ಎಲ್ಲ ಪ್ರಯತ್ನಗಳನ್ನು ನಡೆಸಲಾಗಿದೆ. ಆದರೂ ಕೂಡ ಈ ಸೋಂಕು ಎಲ್ಲೆಡೆ ಹರಡುತ್ತಿದ್ದು, ಹಲವಾರು ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಅವರು ಗದ್ಗದಿತರಾದರು.

ತಮ್ಮ ಕ್ಷೇತ್ರ ವಾರಾಣಾಸಿಯ ವೈದ್ಯರು, ನರ್ಸ್​ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿದ ಅವರು, ಇದೇ ವೇಳೆ ಸೋಂಕಿನ ವಿರುದ್ಧ ಹೋರಾಟದಲ್ಲಿ ಆರೋಗ್ಯ ಕ್ಷೇತ್ರದ ಮುಂಚೂಣಿ ಕಾರ್ಯಕರ್ತರ ಸೇವೆಯನ್ನು ಅಭಿನಂದಿಸಿದರು. ಇದೇ ವೇಳೆ ಸೋಂಕಿ ವಿರುದ್ಧದ ಈ ಹೋರಾಟ ನಿರಂತರವಾಗಿದ್ದು, ಈ ಬಗ್ಗೆ ತೃಪ್ತಿಹೊಂದಬಾರದು ಎಂದು ಕರೆ ನೀಡಿದರು.

ಸೋಂಕಿತರಿಗೆ ಉಪಚರಿಸುವುದು ಈಗ ನಮ್ಮ ಮುಂದಿರುವ ದೊಡ್ಡ ಸವಾಲು ಇದೇ ಕಾರಣಕ್ಕೆ ಎಲ್ಲಿ ರೋಗ ಕಂಡು ಬಂದರು ಅಲ್ಲಿಯೇ ಚಿಕಿತ್ಸೆ ನೀಡಬೇಕು (ಜಹಾನ್​ ಬಿಮರ್​, ವಾಹಿನ್​ ಉಪಚಾರ್​) ಎಂಬ ಘೋಷವಾಕ್ಯದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಘೋಷಣೆ ನೀಡಿದರು. ಈ ಮೂಲಕ ಜನರು ಸಕಾಲಕ್ಕೆ ಚಿಕಿತ್ಸೆ ಸಿಗದೇ ತೊಂದರೆಗೆ ಒಳಗಾಗುವ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದರು.

ಸೋಂಕಿತರ ಚಿಕಿತ್ಸೆಗೆ ಸಾಕಷ್ಟು ಕೆಲಸಗಳು ನಡೆದಿದ್ದು, ಉತ್ತರ ಪ್ರದೇಶದ ಪೂರ್ವಾಂಚಲ್​ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಗಮನ ಹರಿಸು ಅವಶ್ಯಕತೆ ಇದೆ ಎಂದು ಒತ್ತಿ ಹೇಳಿದರು.ಇದೇ ವೇಳೆ ತಮ್ಮ ಕ್ಷೇತ್ರದ ಆಸ್ಪತ್ರೆಗಳ ಕಾರ್ಯವೈಖರಿ ಕುರಿತು ಪರಿಶೀಲನೆ ನಡೆಸಿದರು. ನಗರದ ಪಂಡಿತ್​ ರಾಜನ್​ ಮಿಶ್ರಾ ಕೋವಿಡ್​ ಆಸ್ಪತ್ರೆ ಸೇರಿದಂತೆ ಇತ್ತೀಚೆಗೆ ಆರಂಭವಾದ ಡಿಆರ್​ಡಿಒ ಮತ್ತು ಭಾರತ ಸೇನೆಯ ಪ್ರಯತ್ನವನ್ನು ಕೂಡ ಅವಲೋಕಿಸಿದರು. ಇದೇ ವೇಳೆ ಪ್ರಸ್ತುತ ಪರಿಸ್ಥಿತಿ ಕುರಿತು ಚರ್ಚೆ ನಡೆಸಿದ ಅವರು ಭವಿಷ್ಯದ ತಯಾರಿ ಕುರಿತು ಸಿದ್ಧತೆಗಳ ಕುರಿತು ಕೂಡ ಚರ್ಚಿಸಿದರು.

ಇದೇ ವೇಳೆ ಲಸಿಕೆ ಪ್ರಾಮುಖ್ಯತೆ ಬಗ್ಗೆ ಒತ್ತಿ ಹೇಳಿದ ಅವರು, ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆಯುವುದರಿಂದ ಜನ ಸೇವೆ ನಡೆಸಬಹುದು. ಮುಂದಿನ ದಿನಗಳಲ್ಲಿ ಎಲ್ಲರಿಗೂ ಲಸಿಕೆ ನೀಡುವ ಮೂಲಕ ಅವರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದರು.

ಇನ್ನು ಬ್ಲಾಕ್​ ಫಂಗಸ್ ಹೆಚ್ಚಳದ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಕೋವಿಡ್​ ಸೋಂಕಿನ ವಿರುದ್ಧ ಹೋರಾಟದಲ್ಲಿ ಬ್ಲಾಕ್​ ಫಂಗಸ್​ ಹೊಸ ಸವಾಲಾಗಿ ಪರಿಣಮಿಸಿದೆ. ಅದನ್ನು ಎದುರಿಸಲು ಮುನ್ನೆಚ್ಚರಿಕೆಯ ಸಿದ್ಧತೆಗಳನ್ನು ತೆಗೆದುಕೊಳ್ಳುವತ್ತ ಗಮನಹರಿಸಬೇಕು ಎಂದರು.

ಎರಡನೇ ಅಲೆ ಕೊರೋನಾ ಸೋಂಕಿನ ತೀವ್ರತೆ ಹೆಚ್ಚಿದ್ದು, ಸಾವನ್ನಪ್ಪುತ್ತಿರುವವ ಸಂಖ್ಯೆ ಕೂಡ ಹೆಚ್ಚುತ್ತಿದೆ. ಸೋಂಕು ನಿಭಾಯಿಸುಬ ಬಗ್ಗೆ ಸರ್ಕಾರ ಕೂಡ ಟೀಕೆ ಎದುರಿಸುತ್ತಿದೆ. ಕಳೆದ ವಾರಗಳಲ್ಲಿ ಸಾವಿನ ಸಂಖ್ಯೆ ಏರುತ್ತಿರುವ ಬಗ್ಗೆ ಮತ್ತು ಸೋಂಕು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಪ್ರತಿಪಕ್ಷಗಳು ಟೀಕೆಗಳನ್ನು ಮಾಡಿದ್ದವು. ಸರ್ಕಾರ ಪೂರ್ವ ಸಿದ್ಧತೆ ನಡೆಸದೇ ಲಸಿಕೆ ವಿತರಣೆಯಲ್ಲಿ ಕೂಡ ಸರ್ಕಾರ ವಿಫಲವಾಯಿತು ಎಂದು ಟೀಕೆಗಳನ್ನು ಪ್ರತಿಪಕ್ಷಗಳು ಮಾಡಿದ್ದರು.

ಗುರುವಾರ ರಾಜ್ಯದ 10 ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಪ್ರಧಾನಿ ಕೋವಿಡ್​ ಪರಿಸ್ಥಿತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಇದೇ ವೇಳೆ ಗ್ರಾಮಗಳಲ್ಲಿ ಸೋಂಕು ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದರು

Comments are closed.