ರಾಷ್ಟ್ರೀಯ

‘ಆಪ್ ಗೆ ಅಭಿನಂದನೆ, ಪಂಜಾಬ್ ಜನತೆಯ ಆದೇಶ ನಮ್ರತೆಯಿಂದ ಸ್ವೀಕರಿಸಬೇಕು’: ನವಜೋತ್ ಸಿಧು

Pinterest LinkedIn Tumblr

ಚಂಡಿಗಡ: ಕಾಂಗ್ರೆಸ್​ ಪಕ್ಷದೊಳಗಿನ ತಿಕ್ಕಾಟ, ಮಾಜಿ ಮುಖ್ಯಮಂತ್ರಿ ಅಮರೀಂದರ್​ ಸಿಂಗ್​ ಅವರ ಪಕ್ಷ ತೊರೆಯುವಿಕೆ ಹೀಗೆ ಪಂಜಾಬ್​ನ ಕಾಂಗ್ರೆಸ್​ನಲ್ಲಿ ಆಗಿದ್ದ ಅಲ್ಲೋಲ ಕಲ್ಲೋಲ, ಆಮ್​ ಆದ್ಮಿ ಪಕ್ಷಕ್ಕೆ (ಆಪ್​) ವರದಾನವಾಗಿದ್ದು, ಗುರುವಾರ ನಡೆದ ಆರಂಭಿಕ ಸುತ್ತಿನ ಮತ ಎಣಿಕೆಯ ನಂತರ 117 ವಿಧಾನಸಭಾ ಸ್ಥಾನಗಳ ಪೈಕಿ 91 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷವು ಕ್ಲೀನ್ ಸ್ವೀಪ್‌ನತ್ತ ಮುನ್ನಡೆದಿದೆ.

ಪಂಜಾಬ್ ಅಸೆಂಬ್ಲಿ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿರುವಂತೆಯೇ ಕಾಂಗ್ರೆಸ್‌ನ ನಾಯಕ ನವಜೋತ್ ಸಿಂಗ್ ಸಿಧು ಅವರು “ಜನರ ಧ್ವನಿ ದೇವರ ಧ್ವನಿಯಾಗಿದೆ. ಪಂಜಾಬ್ ಜನತೆಯ ಆದೇಶವನ್ನು ನಮ್ರತೆಯಿಂದ ಸ್ವೀಕರಿಸಿ. ಆಮ್ ಅದ್ಮಿ ಪಕ್ಷಕ್ಕೆ ಅಭಿನಂದನೆಗಳು” ಎಂದು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ಅಮೃತಸರ ಪೂರ್ವ ಕ್ಷೇತ್ರದಿಂದ ಎಎಪಿಯ ಜೀವನ್ ಜ್ಯೋತ್ ಕೌರ್ ವಿರುದ್ಧ 5,000 ಮತಗಳ ಅಂತರದಿಂದ ಸೋತಿದ್ದಾರೆ.

Comments are closed.