ವಾಷಿಂಗ್ಟನ್: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ರಘುರಾಮ್ ರಾಜನ್ ಅವರನ್ನು ಮರು ನೇಮಕ ಮಾಡಿರುವುದು ಅಡಳಿತಾತ್ಮಕ ವಿಷಯದಿಂದಾಗಿಯೇ ಹೊರತು ಮಾಧ್ಯಮಗಳ ಒತ್ತಡದಿಂದಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಡಳಿತಾತ್ಮಕ ವಿಷಯಗಳು ಮಾಧ್ಯಮಗಳ ಹಿತಾಸಕ್ತಿಗೆ ಧಕ್ಕೆ ತರುತ್ತವೆ ಎಂದು ನಾನು ಭಾವಿಸಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ನಿರಂತರವಾಗಿ ಆರ್‌ಬಿಐ ಗವರ್ನರ್ ರಾಜನ್ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸಿ ಅವರನ್ನು ಕೂಡಲೇ ವಜಾಗೊಳಿಸಿ ಎಂದು ಪ್ರಧಾನಿ ಮೋದಿಗೆ ಹಲವು ಬಾರಿ ಪತ್ರ ಬರೆದಿರುವುದು ವಿವಾದಕ್ಕೆ ಕಾರಣವಾಗಿತ್ತು.
ಆರ್‌ಬಿಐ ಗವರ್ನರ್ ರಾಜನ್, ಅನೇಕ ವಿಷಯಗಳಲ್ಲಿ ಕೇಂದ್ರ ಸರಕಾರದ ವಿರುದ್ಧದ ನಿಲುವು ತಳೆದಿರುವುದು ಕೇಂದ್ರ ಸರಕಾರಕ್ಕೆ ನುಂಗಲಾರದ ತುತ್ತಾಗಿದೆ. ದೇಶದ ಆರ್ಥಿಕತೆ ಕುರಿತಂತೆ ಕಣ್ಣಿಲ್ಲದವರ ರಾಜ್ಯದಲ್ಲಿ ಒಕ್ಕಣ್ಣಿನಂತೆ ಎಂದು ಬಣ್ಣಿಸಿರುವುದು ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿಯವರನ್ನು ಕೆರಳಿಸಿತ್ತು.
Comments are closed.