ಅಂತರಾಷ್ಟ್ರೀಯ

ಚಿಕಿತ್ಸೆಗೆ ಸ್ಪಂದಿಸುತ್ತಿರುವ ಫಾರ್ಮುಲಾ ಒನ್ ಲೆಜೆಂಡ್ ಶೂಮಾಕರ್

Pinterest LinkedIn Tumblr

snookarಜರ್ಮನಿ: ಏಳು ಬಾರಿ ಫಾರ್ಮುಲಾ ಒನ್ ವಿಶ್ವ ಚಾಂಪಿಯನ್ ಮೈಕೇಲ್ ಶೂಮಾಕರ್ ತಲೆಗೆ ಉಂಟಾದ ಮಾರಣಾಂತಿಕ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಅವರ ಮಾಜಿ ಬಾಸ್ ಲೂಕಾ ಡಿ ಮಾಂಟೆಜೆಮೊಲೊ ತಿಳಿಸಿದ್ದಾರೆ. ಪೂರ್ಣ ಕಾಲದ ವೈದ್ಯಕೀಯ ಸಿಬ್ಬಂದಿ 47 ವರ್ಷದ ಶೂಮಾಕರ್ ಅವರಿಗೆ ವಿಶೇಷ ಚಿಕಿತ್ಸೆಯನ್ನು ಅವರ ಬಂಗಲೆಯಲ್ಲಿ ನೀಡುತ್ತಿದ್ದಾರೆ.

ಅವರು ತುಂಬಾ ದೃಢಕಾಯ ವ್ಯಕ್ತಿತ್ವ ಎನ್ನುವುದು ತಮಗೆ ಗೊತ್ತಿದೆ. ಇಂತಹ ಕಷ್ಟದ ಸ್ಥಿತಿಯಿಂದ ಅವರು ಹೊರಗೆ ಬರುತ್ತಾರೆಂದು ನಾನು ಆಶಿಸುವೆ ಎಂದು ಮಾಂಟೆಜೆಮೊಲೊ ಹೇಳಿದರು. ಫೆರಾರಿ ಇತಿಹಾಸದಲ್ಲಿ ಮೈಕೇಲ್ ಅತ್ಯಂತ ಮುಖ್ಯ ಚಾಲಕರಾಗಿದ್ದರು ಎಂದು ಇಟಾಲಿಯನ್ ಸ್ಮರಿಸಿದರು.

ಜರ್ಮನ್ ಮೋಟರ್ ರೇಸಿಂಗ್‌ನಲ್ಲಿ ಫೆರಾರಿ ಟೀಂ ಪ್ರಿನ್ಸಿಪಲ್ ಆಗಿದ್ದ ಎಫ್‌ಐಎ ಅಧ್ಯಕ್ಷ ಜೀನ್ ಟಾಡ್ ಮೈಕೇಲ್ ದೃಢಸಂಕಲ್ಪದ ಬಗ್ಗೆ ಮಾತನಾಡಿದರು. ಅವರು ಅತ್ಯಂತ ಪ್ರತಿಭಾವಂತ ಮತ್ತು ದೈನ್ಯತೆಯ ಸ್ವಭಾವದವರು ಎಂದರು. ಜರ್ಮನ್ ರೇಸಿಂಗ್ ಹೀರೋ ಶೂಮಾಕರ್ ಏಳು ವಿಶ್ವ ಪ್ರಶಸ್ತಿಗಳನ್ನು ಮತ್ತು 91 ಬಾರಿ ವಿಜಯ ಸಾಧಿಸಿದ್ದರು. ಸ್ಕೀಯಿಂಗ್ ಅಪಘಾತದಲ್ಲಿ ಗಾಯಗೊಂಡಿದ್ದ ಶೂಮಾಕರ್ ಆಗಿನಿಂದ ಸಾವು, ಬದುಕಿನ ಹೋರಾಟ ನಡೆಸಿದ್ದಾರೆ.

Comments are closed.