ಅಂತರಾಷ್ಟ್ರೀಯ

ಬಾಯ್‌ ಫ್ರೆಂಡ್‌ಗೆ ಮೊಲೆ ಹಾಲೂಡಿಸಲು ಉದ್ಯೋಗ ತೊರೆದ ಮಹಿಳೆ!

Pinterest LinkedIn Tumblr

Breastfeeding-700ನ್ಯೂಯಾರ್ಕ್‌ : ಮೊಲೆ ಹಾಲೂಡಿಸುವಿಕೆಯಿಂದ ತಾಯಿ ಮತ್ತು ಮಗುವಿನ ಮಮತೆಯ ಬಾಂಧವ್ಯ ಅತ್ಯಂತ ಬಲವಾಗಿ ಬೆಸೆದುಕೊಳ್ಳುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಅನಾದಿ ಕಾಲದ ಸತ್ಯ.

ಆದರೆ ಅಟ್ಲಾಂಟಾದ ಜೆನ್ನಿಫ‌ರ್‌ ಮುಲ್‌ಫ‌ರ್ಡ್‌ ಎಂಬ ಮಹಿಳೆ ಬಾಡಿಬಿಲ್ಡರ್‌ ಆಗಿರುವ ತನ್ನ ಬಾಯ್‌ ಫ್ರೆಂಡ್‌ಗೆ ಮೊಲೆ ಹಾಲೂಡಿಸುವ ಸಲುವಾಗಿ ತನ್ನ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟಿದ್ದಾಳೆ ಎಂದರೆ ನೀವು ನಂಬುತ್ತೀರಾ ? ನಿಜ; ನೀವೀಗ ಇದನ್ನು ನಂಬಲೇಬೇಕಾಗಿದೆ !

ಅಂದ ಹಾಗೆ, ತನ್ನ ಬಾಯ್‌ ಫ್ರೆಂಡ್‌, ಬಾಡಿ ಬಿಲ್ಡರ್‌ಗೆ ತನ್ನ ಮೊಲೆ ಹಾಲೂಡಿಸುವುದಕ್ಕಾಗಿ ತಾನು ಕೆಲಸಕ್ಕೆ ರಾಜೀನಾಮೆ ನೀಡಿರುವ ವಿಲಕ್ಷಣಕಾರಿ ಸಂಗತಿಯನ್ನು ಜೆನ್ನಿಫ‌ರ್‌ ಗುಟ್ಟಾಗಿ ಇಟ್ಟಿಲ್ಲ; ಅದನ್ನು ಬಹಿರಂಗವಾಗಿ ಎಲ್ಲರಿಗೂ ಹೇಳಿದ್ದಾಳೆ.

ಮಾತ್ರವಲ್ಲ ಇನ್ನೂ ಒಂದು ಹೆಜ್ಜೆ ಮುಂದು ಹೋಗಿರುವ ಆಕೆ, “ನನ್ನ ಬಾಯ್‌ ಫ್ರೆಂಡ್‌ ಬ್ರಾಡ್‌ ಲೀಸನ್‌ (36) ಜತೆಗೆ ನಾನು ವಯಸ್ಕರ ಮೊಲೆ ಹಾಲೂಡಿಕೆ ಬಾಂಧವ್ಯವನ್ನು ಜಗಜ್ಜಾಹೀರು ಮಾಡಲು ಬಯಸಿದ್ದೇನೆ’ ಎಂದು ಹೇಳಿರುವುದನ್ನು ಡೆಕ್ಕನ್‌ ಕ್ರಾನಿಕಲ್‌ ವರದಿ ಮಾಡಿದೆ.

ಇಷ್ಟಕ್ಕೂ ಜೆನ್ನಿಫ‌ರ್‌ ಗೆ ವಯಸ್ಕರ ಮೊಲೆ ಹಾಲೂಡಿಸುವಿಕೆಯಲ್ಲಿ ಈ ಬಗೆಯ ವಿಶೇಷ ಆಸ್ಥೆ ಮೂಡಲು ಕಾರಣವೇನೆಂದು ಕೇಳುವಿರಾ ? ಜೆನ್ನಿಫ‌ರ್‌ ಪ್ರಕಾರ ಮಹಿಳೆ ತನ್ನ ಜೀವನ ಸಂಗಾತಿಗೆ (ಬಾಯ್‌ ಫ್ರೆಂಡ್‌, ಪತಿ, ಇತ್ಯಾದಿ) ಮೊಲೆ ಹಾಲೂಡಿಸಿದರೆ ಅವರೊಳಗಿನ ಪ್ರೀತಿ, ಮಮತೆ, ವಾತ್ಸಲ್ಯ ಮುಂತಾದ ಬಗೆಯ ಬಾಂಧವ್ಯಗಳು ಗಟ್ಟಿಯಾಗಿ ಅವರು ಜೀವನ ಪೂರ್ತಿ ಜತೆಗಾರರಾಗಿರುತ್ತಾರೆ !

ಜೆನ್ನಿಫ‌ರ್‌ ಅಭಿಪ್ರಾಯಕ್ಕೆ ಆಕೆಯ ಬಾಯ್‌ ಫ್ರೆಂಡ್‌ ಆಗಿರುವ ಬಾಡಿ ಬಿಲ್ಡರ್‌ ಬ್ರಾಡ್‌ ಹೀಗೆ ಧ್ವನಿಗೂಡಿಸುತ್ತಾನೆ :

“ನಾವೀಗ ವೇಳಾ ಪಟ್ಟಿ ಪ್ರಕಾರ ಮೊಲೆ ಹಾಲೂಡಿಸುವಿಕೆಯನ್ನು ಕೈಗೊಳ್ಳುತ್ತಿದ್ದೇವೆ. ಎರಡು ತಾಸಿಗೆ ಅಥವಾ ಮೂರು ತಾಸಿಗೊಮ್ಮೆ ಎಂಬಂತೆ ನಾವಿದನ್ನು ಮಾಡುತ್ತಿದ್ದೇವೆ. ನಿಂತಿದ್ದಾಗ, ಹಾಸಿಗೆಯಲ್ಲಿ ಮಲಗಿಕೊಂಡಿರುವಾಗ, ಊಟದ ಹೊತ್ತಿನಲ್ಲಿ ಮಧ್ಯಾಹ್ನ ಮನೆಗೆ ಬಂದಾಗ ನಾವಿದನ್ನು ಕೈಗೊಳ್ಳುತ್ತೇವೆ.

ಇದು ನಮ್ಮೊಳಗಿನ ಬಾಂಧವ್ಯವನ್ನು ಗಟ್ಟಿಗೊಳಿಸಿದೆ. ಪ್ರೀತಿ, ಮಮತೆ, ವಾತ್ಸಲ್ಯವನ್ನು ಹೆಚ್ಚಿಸಿದೆ. ನಾವಿಬ್ಬರೂ ಪರಸ್ಪರರಿಗೆ ತುಂಬಾ ಹತ್ತಿರವಾಗಿದ್ದೇವೆ; ಆದರೆ ಎಲ್ಲ ಪುರುಷರಿಗೆ ಸಾಮಾನ್ಯವಾಗಿ ಬಾಯಿಯಲ್ಲಿ ನಯವಾದ ಮೊಲೆ ತೊಟ್ಟನ್ನು ಇರಿಸಿಕೊಳ್ಳುವುದು ಅಷ್ಟು ಹಿತವೆನಿಸದು – ಅಲ್ಲವೇ ?

ಬ್ರಾಡ್‌ ಈ ವಿಷಯಗಳನ್ನು ಮೆಲ್ಬೋರ್ನ್ ರೇಡಿಯೋ ಶೋ ಮ್ಯಾಟ್‌ ಆ್ಯಂಡ್‌ ಮೆಶೆಲ್‌ (ಕೆಐಐಎಸ್‌ 101.02) ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾನೆ.

ಬ್ರಾಡ್‌ ಗೆ ಮೊಲೆ ಹಾಲೂಡಿಸುವ ಏಳು ಸಂದರ್ಭಗಳ ಪೈಕಿ ಆರರಲ್ಲಿ ತಾವು ಸೆಕ್ಸ್‌ ನಡೆಸುವ ಹಂತ ತಲುಪಿದ್ದು ಇದರಿಂದ ತಮ್ಮೊಳಗಿನ ಮಾನಸಿಕ, ದೈಹಿಕ, ಲೈಂಗಿಕ ಸಂಬಂಧಗಳು ಸಾಕಷ್ಟು ಬಲಗೊಳ್ಳುವಂತಾಗಿದೆ ಎಂದು ಜೆನ್ನಿಫ‌ರ್‌ ಹೇಳುತ್ತಾಳೆ.

ಮೊಲೆ ಹಾಲೂಡಿಸುವುದು ಮಹಿಳೆ ಮತ್ತು ಪುರುಷನ ನಡುವಿನ ತೀರ ಸಹಜವಾದ ಬಾಂಧವ್ಯವಾಗಿದೆ; ಇದು ಬದುಕಿನಲ್ಲಿ ತುಂಬಾ ನಿರಾಳವಾದ ಭಾವನೆಯನ್ನು ಉಂಟುಮಾಡುತ್ತದೆ; ಈ ನಿರಾಳತೆ ಅವರ್ಣನೀಯವಾಗಿದೆ ಎಂದು ಜೆನ್ನಿಫ‌ರ್‌ ಹೇಳುತ್ತಾಳೆ.
-ಉದಯವಾಣಿ

Comments are closed.