ವಾಷಿಂಗ್ಟನ್, ಜೂ.10- ಇದೀಗ ಮುಕ್ತಾಯಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಬೆನ್ನಲ್ಲೇ, ಅವರ ದೂರದೃಷ್ಟಿಯ ಭಾರತ-ಅಮೆರಿಕ ಒಪ್ಪಂದಗಳಿಗೆ ಬರಾಕ್ ಒಬಾಮ ಆಡಳಿತ ‘ಮೋದಿ ಸಿದ್ಧಾಂತ’ ಎಂದೇ ನಾಮಕರಣ ಮಾಡಿರುವುದು ಮೋದಿಯವರ ಅಮೆರಿಕ ಭೇಟಿ ಯಶಸ್ಸಿಗೆ ಸಾಕ್ಷಿಯಾಗಿದೆ.
ಅಮೆರಿಕ ಕಾಂಗ್ರೆಸ್‌ನ ಜಂಟಿ ಅಧಿವೇಶನದಲ್ಲಿ ಮಹತ್ವದ ಭಾಷಣ ಮಾಡುವ ಮುನ್ನ, ಉಭಯ ದೇಶಗಳ ನಾಯಕರ ನಡುವೆ ನಡೆದ ದ್ವಿಪಕ್ಷೀಯ ಒಪ್ಪಂದ ಮಾತುಕತೆಗಳ ವೇಳೆ ಪ್ರಧಾನಿ ಮೋದಿ ಅವರು ಮುಂದಿಟ್ಟ ಹಲವು ಅಂಶಗಳು ಎರಡೂ ದೇಶಗಳ ಬಾಂಧವ್ಯ ವೃದ್ಧಿಗೆ ಸಂಪೂರ್ಣವಾಗಿ ನೆರವಾಗಲಿವೆ.
ಈ ಒಪ್ಪಂದಗಳಿಗೆ ಮೋದಿ ಸಿದ್ಧಾಂತ ಎಂದೇ ಹೆಸರಿಸಲು ನಿರ್ಧರಿಸಲಾಗಿದೆ ಎಂದು ದಕ್ಷಿಣ ಮತ್ತು ಮಧ್ಯ ಆಸಿಯಾ ಸಹಾಯಕ ಕಾರ್ಯದರ್ಶಿ ನಿಶಾ ದೇಸಾಯಿ ಬಿಸ್ವಾಲ್ ತಿಳಿಸಿದ್ದಾರೆ.
Comments are closed.