ಲಂಡನ್: ಐಎಸ್ ಐಎಸ್ ಉಗ್ರಗಾಮಿ ಸಂಘಟನೆಯ ಸ್ವಘೋಷಿತ ನಾಯಕ ಅಬು ಬಕ್ರ್ ಅಲ್ ಬಾಗ್ದಾದಿ ಸಂಯೋಜಿತ ಪಡೆಯ ವಾಯುದಾಳಿಗೆ ಗಾಯಗೊಂಡಿದ್ದಾನೆ ಎಂದು ಮಾಧ್ಯಮ ವರದಿ ಮಾಡಿದೆ.
ಬಾಗ್ದಾದಿ ತನ್ನ ಬೆಂಗಾವಲಿನೊಂದಿಗೆ ಸಂಘಟನೆಯ ಇತರ ಸದಸ್ಯರೊಡಗೂಡಿ ಪ್ರಯಾಣಿಸುತ್ತಿದ್ದಾಗ ವಾಯು ದಾಳಿಗೆ ಒಳಗಾಗಿದ್ದಾನೆ ಎಂದು ಎಕ್ಸ್ ಪ್ರೆಸ್.ಕೊ.ಯುಕೆ ವರದಿ ಮಾಡಿದೆ.
ಇರಾಕ್ ನ ಸ್ಥಳೀಯ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಇರಾಕ್ ನ ನ್ಯೂಸ್ ಚಾನೆಲ್ ಅಲ್ ಸುಮಾರಿಯಾ ವರದಿ ಮಾಡಿದ್ದು, ಸಂಯೋಜಿತ ವಾಯು ದಾಳಿಯಲ್ಲಿ ಬಾಗ್ದಾದಿ ಮತ್ತು ಇತರರು ಗಾಯಗೊಂಡಿದ್ದಾರೆ.
ಅಂತಾರಾಷ್ಟ್ರೀಯ ಸಮ್ಮಿಶ್ರ ಸರ್ಕಾರ ನಿನ್ನೆ ಇರಾಕ್ ಮತ್ತು ಸಿರಿಯಾದ ಮಧ್ಯೆಭಾಗದ ಗಡಿ ಪ್ರದೇಶದಲ್ಲಿ ಐಸಿಸ್ ಉಗ್ರಗಾಮಿಗಳು ಇರುವ ಸ್ಥಳ ಪತ್ತೆಹಚ್ಚಿ ಬಾಂಬ್ ದಾಳಿ ನಡೆಸಿತ್ತು. ಇದರಲ್ಲಿ ಅಬು ಬಕ್ರ್ ಅಲ್ ಬಾಗ್ದಾದಿ ಮತ್ತು ಐಸಿಸ್ ನ ಕೆಲ ಸದಸ್ಯರು ಗಾಯಗೊಂಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಗುಪ್ತಚರ ಇಲಾಖೆಯ ನಿಖರ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ.
ಬಗ್ದಾದಿ ಮತ್ತು ಆತನ ಕೆಲ ಸದಸ್ಯರು ಸಿರಿಯಾದಿಂದ ಬೆಂಗಾವಲು ಕಾರಿನಲ್ಲಿ ಇರಾಕ್ ಗೆ ಬಂದಿದ್ದರು. ದಾಳಿ ನಡೆದ ಪ್ರದೇಶ ಐಸಿಸ್ ನ ಪ್ರಭಾವಿ ವಲಯವಾಗಿತ್ತು.
ಕಳೆದ ವರ್ಷ ಮಾರ್ಚ್ 18ರಂದು ಬಾಗ್ದಾದಿ ಮತ್ತು ಇತರ ಮೂವರು ಇಂತಹದೇ ವಾಯುದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು.
ಅಂತರಾಷ್ಟ್ರೀಯ
Comments are closed.