ಅಂತರಾಷ್ಟ್ರೀಯ

ಕಳೆದೆರಡು ವರ್ಷಗಳಿಂದ ಕೋಳಿಯೊಂದಿಗೆ ಬೋಟ್​ನಲ್ಲಿ ವಿಶ್ವಸಂಚಾರಕ್ಕೆ ಹೊರಟ ಗಿರೆಕ್​ ಸೌದೀ

Pinterest LinkedIn Tumblr

Guirec

ಕೆಲವರಿಗೆ ಏನಾದರೊಂದು ಸಾಹಸ ಮಾಡಬೇಕೆನ್ನುವ ಹುಚ್ಚು, ಇನ್ನು ಕೆಲವರಿಗೆ ಸಾಹಸದಲ್ಲೂ ವೈಶಿಷ್ಟ್ಯೆ ಪ್ರದರ್ಶಿಸುವ ಹುಚ್ಚು. ಫ್ರಾನ್ಸ್ನ 24ರ ಹರೆಯದ ಗಿರೆಕ್ ಸೌದೀ ಎಂಬಾತ ತನ್ನ ಸಾಕು ಹೆಂಟೆಯೊಂದಿಗೆ ಜಗತ್ತನ್ನು ಸುತ್ತಲು ಹೊರಟಿದ್ದಾನೆ.

2014ರಿಂದ ಈತ ಸಾಹಸ ಯಾತ್ರೆಗೆ ಕೈ ಜೋಡಿಸಿದ್ದು, ಇದಕ್ಕಾಗಿ 30 ವರ್ಷ ಹಳೆಯ ಬೋಟ್ಅನ್ನು ಗಿರೆಕ್ ಬಳಸುತ್ತಿದ್ದಾನೆ. ಆತನ ಸಾಕು ಹೆಂಟೆಯು ಕ್ಯಾನರಿ ಐಲ್ಯಾಂಡ್ನಿಂದ ಆತನಿಗೆ ಗಿಫ್ಟ್ ಆಗಿ ಬಂದಿದೆಯಂತೆ. ಈಗಾಗಲೇ ಅವರಿಬ್ಬರು ಕೆರಿಬಿಯನ್ ಮತ್ತು ಗ್ರೀನ್ಲ್ಯಾಂಡ್ನ್ನು ಸುತ್ತುಹೊಡೆದಿದ್ದಾರೆ. ತನ್ನ ಪೆಟ್ ಕೋಳಿಗೆ ಈತ ಮೋನಿಕ್ ಎಂದು ಹೆಸರಿಟ್ಟಿದ್ದಾನೆ.

ಬೋಟ್ನಲ್ಲಿ ಅವರಿಬ್ಬರೇ ಸಾಗುತ್ತಿದ್ದಾರೆ. ಪ್ರಯಾಣದುದ್ದಕ್ಕೂ ಕೋಳಿಯೊಂದಿಗೆ ಸೆಲ್ಪಿ ತೆಗೆದು ಆತ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾನೆ. ಕಳೆದೆರಡು ವರ್ಷಗಳಿಂದ ಮೋನಿಕ್ ಮತ್ತು ಗಿರೆಕ್ ವಿಶ್ವ ಸುತ್ತುತ್ತಿದ್ದಾರೆ. ಮೋನಿಕ್ ಹೆಂಟೆ ಇಡುವ ಮೊಟ್ಟೆಯನ್ನು ಗಿರೆಕ್ ತಿನ್ನುತ್ತಾನೆ. ಒಮ್ಮೆ 28 ದಿನದಲ್ಲಿ 25 ಮೊಟ್ಟೆ ಇಟ್ಟಿದೆಯಂತೆ.

ಮೋನಿಕ್ ಮಾತ್ರ ಉತ್ತಮ ಜತೆಗಾತಿಯಂತೆ ಒಟ್ಟಿಗೆ ಸಾಗುತ್ತಿದೆ. ಯಾವುದೇ ಕಿರಿಕಿರಿ ಮಾಡಿಲ್ಲವಂತೆ. ವಿವಿಧ ಹವಾಮಾನದ ಪ್ರದೇಶಕ್ಕೆ ಸಾಗುವಾಗಲೂ ಕೋಳಿ ಮಾತ್ರ ಏನೂ ಅಲ್ಲವೆಂಬಂತೆ ಬೆಚ್ಚಗೆ ಕುಳಿತ್ತಿತ್ತಂತೆ. ಪ್ರಯಾಣದ ಸಂದರ್ಭದಲ್ಲಿ ಗಿರೆಕ್ ಸ್ವತಃ ಅಡುಗೆ ಮಾಡುತ್ತಾನೆ. ಅದೇ ಅಡುಗೆಯನ್ನು ಕೋಳಿಗೂ ಕೊಡುತ್ತಾನೆ.

ಗಿರೆಕ್ಗೆ ಜಗತ್ತು ಸುತ್ತುವ ಹುಚ್ಚು ಬಹಳ ಹಿಂದಿನಿಂದಲೇ ಇತ್ತಂತೆ. 18 ವರ್ಷ ವಯಸ್ಸಿಗೇ ಮನೆಬಿಟ್ಟ ಆತ ವಿವಿಧೆಡೆ ಸಂಚಾರ ಆರಂಭಿಸಿದ್ದ. ಫೇಸ್ಬುಕ್ ಮತ್ತು ಇನ್ಸಾ್ಟಗ್ರಾಂಗೆ ಈತ ನಿರಂತರವಾಗಿ ತನ್ನ ಸಾಹಸ ಪ್ರಯಾಣದ ಕುರಿತು ಪೋಸ್ಟ್ ಮಾಡಿ ಗೆಳೆಯರೊಂದಿಗೆ ತನ್ನ ಪ್ರಯಾಣದ ಕುರಿತು ಮಾಹಿತಿ ಹಂಚಿಕೊಳ್ಳುತ್ತಿದ್ದಾನೆ. ಒಟ್ಟಿನಲ್ಲಿ ಕೋಳಿಯೊಂದಿಗೆ ವಿಶ್ವಸಂಚಾರಕ್ಕೆ ಹೊರಟ ಗಿರೆಕ್ನ ಸಾಹಸ ಮೆಚ್ಚುವಂಥಾದ್ದೇ..

Comments are closed.