ಅಂತರಾಷ್ಟ್ರೀಯ

ನಡೆದಾಡುವ ಮೀನನ್ನು ನೋಡಿದ್ದೀರಾ..ಈ ಮೀನಿಗೆ ಕೈಗಳಿವೆ..!

Pinterest LinkedIn Tumblr

fish

ನಡೆದಾಡುವ ಮೀನನ್ನು ನೋಡಿದರೆ ಹೇಗಿರುತ್ತದೆ? ಚೀನಾದ ಜನರ ಸ್ಥಿತಿಯೂ ಹೀಗೆ ಆಗಿದೆ. ಚೀನಾದ ಹೂಬಿ ಪ್ರಾಂತ್ಯದ ಶಿಯಾನ್ನಲ್ಲಿರುವ ಪೀಪಲ್ಸ್ ಪಾರ್ಕ್ ಝುೂನಲ್ಲಿ ಇದೀಗ ನಡೆದಾಡುವ ಮೀನುಗಳೇ ಪ್ರಮುಖ ಆಕರ್ಷಣೆ. ಗುಲಾಬಿ, ನೀಲಿ, ತಿಳಿ ಹಸಿರು ಮತ್ತು ಕೇಸರಿ ಬಣ್ಣದಲ್ಲಿರುವ ಮೀನನ್ನು ನೋಡಲು ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಈ ಮೀನುಗಳಿಗೆ ಕೈಗಳಿರುವುದೇ ಎಲ್ಲರ ಅಚ್ಚರಿಗೆ ಕಾರಣ. ಈ ಮೀನುಗಳು ಮೆಕ್ಸಿಕೋದಲ್ಲಿ ಪ್ರಾಚೀನ ಕಾಲದಿಂದಲೂ ಅಡುಗೆಗೆ ಬಳಸುತ್ತಿರುವ ಸಾಲಮಂಡರ್ಸ್ಗಳು. ಆದರೆ ಇದೀಗ ಅಳಿವಿನಂಚಿನಲ್ಲಿದ್ದು, ರಕ್ಷಣೆಗೆ ಶ್ರಮಿಸಲಾಗುತ್ತಿದೆ.

ಮಾಲಿನ್ಯದಿಂದ ನಶಿಸಿಹೋಯ್ತು ಸಂತತಿ: ನೂರಾರು ವರ್ಷಗಳಿಂದ ಮೆಕ್ಸಿಕೋ ನಗರದ ಕ್ಸೋಚಿಮಿಲ್ಕೋ ಸರೋವರದಲ್ಲಿ ಕಾಣಸಿಗುತ್ತಿದ್ದ ಈ ಅಪರೂಪದ ಸಾಲಮಂಡರ್ ಮೀನುಗಳು ಇದೀಗ ನಶಿಸಿಹೋಗುತ್ತಿವೆ. ಸರೋವರಕ್ಕೆ ನಗರದ ಕೊಳಚೆ ನೀರನ್ನು ಭಾರಿ ಪ್ರಮಾಣದಲ್ಲಿ ಬಿಡುತ್ತಿರುವುದರಿಂದ ಸಾಲಮಂಡರ್ನ ಮೊಟ್ಟೆಗಳು ನಾಶವಾಗುತ್ತಿವೆ. ಇದೀಗ ಇದನ್ನು ಸಂರಕ್ಷಿಸುವ ಕಾರ್ಯ ಪ್ರಗತಿಯಲ್ಲಿದೆ.

ಭಾರಿ ಭದ್ರತೆ: ಅಪರೂಪದ ಸಾಲಮಂಡರ್ ಮೀನುಗಳಿರುವ ನೀರಿನ ತೊಟ್ಟಿಗೆ ಭದ್ರತೆ ಒದಗಿಸಲಾಗಿದೆ. ಮೀನನ್ನು ಕದ್ದು ಸಾಗಿಸುವ ಭಯವಿರುವುದರಿಂದ ತೊಟ್ಟಿಗೆ ಬೀಗ ಹಾಕಲಾಗಿದೆ. ಜತೆಗೆ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಈ ಮೀನುಗಳನ್ನು ಆಹಾರಕ್ಕಾಗಿ ಬಳಸಿಕೊಳ್ಳುತ್ತಾರೆ. ಇದರ ಜತೆಗೆ ವಿಜ್ಞಾನಿಗಳ ದೃಷ್ಟಿಯೂ ಇದರ ಮೇಲಿದೆ. ಈ ಮೀನುಗಳ ಕೈ ಕತ್ತರಿಸಿ ಹೋದರೂ ಮತ್ತೆ ಬೆಳೆಯುತ್ತದೆ. ಹೀಗಾಗಿ ಇದರ ಬಗ್ಗೆ ಪ್ರಯೋಗಗಳಾಗುತ್ತಿರುವುದರಿಂದ ಮೀನನ್ನು ಕದಿಯುವ ಸಾಧ್ಯತೆಯಿದೆ ಎಂದು ಮೃಗಾಲಯದ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

Comments are closed.