ಢಾಕಾ: ಭಯೋತ್ಪಾದನೆಯನ್ನು ಹರಾಮ್ ಎಂದು ಕರೆದಿರುವ ಬಾಂಗ್ಲಾದೇಶದ 1 ಲಕ್ಷಕ್ಕೂ ಹೆಚ್ಚು ಮೌಲ್ವಿಗಳು ಸಾಮೂಹಿಕ ಫತ್ವಾ ಹೊರಡಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಮೂಲಭೂತವಾದ ಮತ್ತು ಉಗ್ರವಾದ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೌಲ್ವಿಗಳು ಭಯೋತ್ಪಾದನೆ ವಿರುದ್ಧ ಸಾಮೂಹಿಕ ಫತ್ವಾ ಹೊರಡಿಸಿದ್ದು, ಭಯೋತ್ಪಾದನೆಯನ್ನು ಪಾಲಿಸದಿರಲು ಸೂಚಿಸಿದ್ದಾರೆ. ಇಸ್ಲಾಂ ಧರ್ಮ ಶಾಂತಿಯನ್ನು ಬಯಸುತ್ತದೆ. ಭಯೋತ್ಪಾದನೆಗೆ ಪ್ರಚೋದನೆ ನೀಡುವುದಿಲ್ಲ ಎಂದು ಬಾಂಗ್ಲಾದೇಶ ಜಮಿಯತುಲ್ ಉಲಮ್ ಉಧ್ಯಕ್ಷ ಮೌಲಾನ ಫರೀದ್ ಉದಿನ್ ಮಸೂದ್ ಹೇಳಿದ್ದು, ಭಯೋತ್ಪಾದನೆ ವಿರುದ್ಧ 1 ಲಕ್ಷಕ್ಕೂ ಹೆಚ್ಚು ಮುಫ್ತಿಗಳು, ಅಲೀಂಗಳು ಮತ್ತು ಉಲ್ಮಾಸ್ ಗಳು ಫತ್ವಾಗೆ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮುಸ್ಲಿಂ ರಾಷ್ಟ್ರವಾಗಿರುವ ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದುಗಳು ಮತ್ತು ಕ್ರೈಸ್ತರ ಮೇಲೆ ದಾಳಿ ನಡೆದಿದ್ದು, ಹಿಂಸೆ ಮತ್ತು ಭಯೋತ್ಪಾದಕ ಮನೋವೃತ್ತಿಯನ್ನು ಶಮನ ಮಾಡಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾಗುತ್ತಿದ್ದು, ಇದರಿಂದಾಗಿ ಭಯೋತ್ಪಾದನೆ ವಿರುದ್ಧ ಫತ್ವಾ ಹೊರಡಿಸಲು ಮೌಲ್ವಿಗಳು ತೀರ್ಮಾನಿಸಿದ್ದರು.
ಅಂತರಾಷ್ಟ್ರೀಯ
Comments are closed.