ಅಂತರಾಷ್ಟ್ರೀಯ

ಹಳಿಯ ಪಕ್ಕದಲ್ಲೇ ಸೆಕ್ಸ್; ರೈಲು ಹರಿದು ಮಹಿಳೆ ಶಿರಚ್ಛೇದನ!

Pinterest LinkedIn Tumblr

Trans-Syberia-Train-600ಸೈಬೀರಿಯ : ‘ಕಾಮಾತುರಾಣಂ ನ ಭಯಂ ನ ಲಜ್ಜಾ’ ಎಂಬ ಪ್ರಾಚೀನ ಮಾತಿದೆ. ಕಾಮಾಸಕ್ತರಿಗೆ ಭಯ ಮತ್ತು ಲಜ್ಜೆ ಎರಡೂ ಇರುವುದಿಲ್ಲವಂತೆ. ಆಧುನಿಕ ಜಗತ್ತಿಗಂತೂ ಈ ಮಾತು ಬಹುವಾಗಿ ಅನ್ವಯಿಸುತ್ತದೆ. ಎಲ್ಲೆಂದರಲ್ಲಿ ಮುಕ್ತ ಸೆಕ್ಸ್‌ಗೆ ತೊಡಗಿಕೊಳ್ಳುವ ಮಂದಿಗೆ ಇಂದು ಜಗತ್ತಿನಲ್ಲಿ ಎಲ್ಲಿಯೂ ಕೊರತೆ ಇಲ್ಲ. ಮುಕ್ತ ಬಯಲಲ್ಲಿ ಸೆಕ್ಸ್‌ ನಡೆಸಲು ಬಯಸುವವರೇ ಇಂದು ಹೆಚ್ಚು. ಆದರೆ ಹೊರಾಂಗಣ ಸೆಕ್ಸ್‌ ಪ್ರಾಣಕ್ಕೇ ಮಾರಕವಾಗಬಹುದು ಎಂಬುದಕ್ಕೆ ಇಲ್ಲೊಂದು ನಿದರ್ಶನವಿದೆ.

ಈ ಘಟನೆ ನಡೆದದ್ದು ಸೈಬೀರಿಯದ ಅತ್ಯಂತ ದುರ್ಗಮ ಬುರ್ಯಾತಿಯಾ ಪ್ರಾಂತ್ಯದಲ್ಲಿನ ಝೌಡಿನ್‌ಸ್ಕಯಾ ರೈಲು ನಿಲ್ದಾಣಕ್ಕೆ ಸಮೀಪದ ಒಂದು ತಾಣದಲ್ಲಿ – ಟ್ರಾನ್ಸ್‌ ಸೈಬೀರಿಯ ರೈಲು ಹಳಿಯ ಪಕ್ಕದಲ್ಲಿ !

ಹೊರಾಂಗಣ ಸೆಕ್ಸ್‌ ಪ್ರೇಮಿ ಜೋಡಿಯೊಂದು ಇಲ್ಲಿನ ರೈಲು ಹಳಿಯ ಪಕ್ಕದಲ್ಲೇ ಸೆಕ್ಸ್‌ ನಿರತವಾಗಿತ್ತು. ಪುರುಷನ ಮೇಲೆ ಮಹಿಳೆ ಎರಗಿಕೊಂಡ ಶೈಲಿಯಲ್ಲಿ ಈ ಜೋಡಿ ಸೆಕ್ಸ್‌ ಆನಂದಿಸುತ್ತಿತ್ತು.

ಆ ಸಂದರ್ಭದಲ್ಲಿ ಇದ್ದಕ್ಕಿದ್ದಂತೆಯೇ ರೈಲೊಂದು ವೇಗದಲ್ಲಿ ಬರತೊಡಗಿತು. ಆ ರೈಲು ಬರುತ್ತಿದ್ದ ಹಳಿಯ ಪಕ್ಕದಲ್ಲೇ ಪ್ರಿಯಕರನೊಂದಿಗೆ ಸೆಕ್ಸ್‌ ನಡೆಸುತ್ತಿದ್ದ ಮಹಿಳೆಯು ರೈಲಿನ ಸದ್ದನ್ನು ಕೇಳುತ್ತಲೇ ಎದ್ದು ನಿಲ್ಲ ತೊಡಗಿದಳು. ಆಕೆ ಮಾಡಿದ ತಪ್ಪು ಇಷ್ಟೇ ! ಆಕೆ ಎದ್ದು ನಿಲ್ಲುತ್ತಿದ್ದಂತೆ ಭಾರೀ ವೇಗದಲ್ಲಿ ಆಕೆಯ ತಲೆಯನ್ನು ಸಾರಿಸಿಕೊಂಡು ಮುನ್ನುಗ್ಗಿ ಹೋದ ರೈಲಿನಿಂದ ಕ್ಷಣಾರ್ಧದಲ್ಲಿ ಆಕೆಯ ಶಿರಚ್ಛೇದನವಾಗಿ ಹೋಗಿತ್ತು.

ಒಂದೊಮ್ಮೆ ಆಕೆ ರೈಲು ಬರುತ್ತಿದ್ದಾಗ ನಿಲ್ಲದೆ ಪ್ರಿಯತಮನ ಮೇಲೆಯೇ ಮಲಗಿಕೊಂಡಿರುತ್ತಿದ್ದರೆ ಆಕೆ ಬದುಕುತ್ತಿದ್ದಳು ಎಂದು ಈ ಘಟನೆಗೆ ಮೂಕ ಸಾಕ್ಷಿಯಾಗಿದ್ದ ರೈಲ್ವೇ ಮೂಲಗಳು ಹೇಳಿವೆ !

ಸೆಕ್ಸ್‌ ನಿರತ ಜೋಡಿ ವಾಸಿಸಲು ಮನೆ ಇಲ್ಲದ ಜೋಡಿಯಾಗಿತ್ತಲ್ಲದೆ ಇಬ್ಬರೂ ಕಂಠ ಪೂರ್ತಿ ಮದ್ಯ ಸೇವನೆ ಮಾಡಿದ್ದರು. ಅಂದ ಹಾಗೆ, ಈ ರೀತಿ ಮಾತ್ರವಲ್ಲದೆ, ಬೇರೆ ಬೇರೆ ರೀತಿಯಲ್ಲಿ ಸೈಬೀರಿಯದಲ್ಲಿ ರೈಲು ಹಳಿ ದಾಟುವ ವೇಳೆ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ. ಸೆಕ್ಸ್‌ ನಿರತ ಜೋಡಿಯ ಈ ನಿದರ್ಶನ ಒಂದು ತಾಜಾ ಪ್ರಕರಣವಾಗಿದೆ!
-ಉದಯವಾಣಿ

Comments are closed.