ಡರ್ಬಾನ್ : ಪೂರ್ವ ಆಫ್ರಿಕದ ಮಲಾವಿ ದೇಶದಲ್ಲಿ ವಿಚಿತ್ರವಾದ ಒಂದು ಸಂಪ್ರದಾಯವಿದೆ. ಅದೆಂದರೆ ಇಲ್ಲಿನ ತಾಯಂದಿರು ಈಗಷ್ಟೇ ಪ್ರಾಯಕ್ಕೆ ಬಂದ ತಮ್ಮ ಹೆಣ್ಣು ಮಕ್ಕಳನ್ನು ಅವರ ಲೈಂಗಿಕ ಪರಿಶುದ್ಧತೆಗಾಗಿ ತಾವು ದೈವಿಕವೆಂದು ತಿಳಿಯುವ ಅಪರಿಚಿತ ವ್ಯಕ್ತಿಯೊಂದಿಗೆ ಸೆಕ್ಸ್ ನಡೆಸುವುದಕ್ಕೆ ಬಲವಂತಪಡಿಸುತ್ತಾರೆ.
ಮಾಧ್ಯಮ ವರದಿಗಳು ಪೂರ್ವ ಆಫ್ರಿಕ ದೇಶಗಳಲ್ಲಿ ಈಗಲೂ ಚಾಲ್ತಿಯಲ್ಲಿರುವ ಈ ವಿಚಿತ್ರ ಸಂಪ್ರದಾಯವನ್ನು ವರದಿ ಮಾಡಿವೆ. ಟಿವಿ ಮಾಧ್ಯಮದಲ್ಲಿ ಈಚೆಗೆ ನಡೆಸಲಾದ ಸಂದರ್ಶನವೊಂದರಲ್ಲಿ ಪಾದ್ರಿಯೋರ್ವರು ತಾನು ನೂರಕ್ಕೂ ಅಧಿಕ ಹೆಣ್ಣು ಮಕ್ಕಳು ಹಾಗೂ ಮಹಿಳೆಯರೊಂದಿಗೆ ಸೆಕ್ಸ್ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ.
ಪ್ರಾಯಕ್ಕೆ ಬಂದಿರುವ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಪರಿಶುದ್ಧಗೊಳಿಸುವ ಸಂಪ್ರದಾಯದ ಪ್ರಕಾರ ತಾನು ಲೆಕ್ಕವಿಲ್ಲದಷ್ಟು ಹುಡುಗಿಯರೊಂದಿಗೆ ಸೆಕ್ಸ್ ನಡೆಸಿದ್ದೇನೆ ಎಂದು ಆ ಪಾದ್ರಿ ಬಹಿರಂಗಪಡಿಸಿದ್ದಾರೆ. ಅತ್ಯಂತ ದೂರದ ದುರ್ಗಮ ಗ್ರಾಮದಲ್ಲಿ ವಾಸವಾಗಿರುವ ತಾನು ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಪರಿಶುದ್ಧಗೊಳಿಸುವ ಧಾರ್ಮಿಕ ಪ್ರಕ್ರಿಯೆಯಾಗಿ ಹಳ್ಳಿಯಿಂದ ಹಳ್ಳಿಗೆ ಸಂಚರಿಸುತ್ತಲೇ ಇರುತ್ತೇನೆ ಎಂದವರು ಹೇಳಿಕೊಂಡಿದ್ದಾರೆ.
ಈ ಲೈಂಗಿಕ ಪರಿಶುದ್ಧತೆಯ ಪ್ರಕ್ರಿಯೆಯನ್ನು ನಿರ್ವಹಿಸುವಾಗಿನ ತನ್ನ ಅನುಭವವನ್ನು ಈ ಪಾದ್ರಿ ಹೀಗೆ ಹೇಳಿಕೊಂಡಿದ್ದಾರೆ :
ಕೆಲವು ಸಂದರ್ಭಗಳಲ್ಲಿ ಕೆಲವು ಹುಡುಗಿಯರು ನಾಚಿಕೆ, ಭಯ, ಆತಂಕದ ಕಾರಣಗಳಿಗಾಗಿ ಮುಟ್ಟಲು ಕೂಡ ಬಿಡುತ್ತಿರಲಿಲ್ಲ. ಅಂತಹ ಸಂದರ್ಭಗಳಲ್ಲಿ ನಾನು ಬಹುತೇಕ ಬಲ ಪ್ರದರ್ಶನದಿಂದಲೇ ಅವರ ಲೈಂಗಿಕ ಪರಿಶುದ್ಧತೆಯನ್ನು ಕೈಗೊಂಡಿದ್ದೇನೆ.
ಲೈಂಗಿಕ ಪರಿಶುದ್ಧತೆಯ ಈ ಧಾರ್ಮಿಕ ಪ್ರಕ್ರಿಯೆಗಾಗಿ ನನಗೆ ಸಾಮಾನ್ಯವಾಗಿ ತಲಾ ಹುಡುಗಿಗೆ 450 ರೂ.ಗಳಂತೆ ಜನರು ಹಣ ಪಾವತಿಸುತ್ತಾರೆ. ಎಷ್ಟೋ ವೇಳೆ ಈ ಪ್ರಕ್ರಿಯೆಗೆ, ತಮ್ಮ ತಾಯಿಯ ಬಲವಂತದಿಂದ ಒಳಪಡುವ ಹುಡುಗಿಯರು 12 ಅಥವಾ 13 ವರ್ಷ ಪ್ರಾಯವನ್ನೂ ದಾಟಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಲೈಂಗಿಕ ಪರಿಶುದ್ಧತೆಯ ಪ್ರಕ್ರಿಯೆಯು ಬಲವಂತದಿಂದ ನಡೆದಿದೆ.
ಕೆಲವು ಸಂದರ್ಭಗಳಲ್ಲಿ ಆಗ ತಾನೇ ಗಂಡ ಸತ್ತ ವಿಧವೆಯರಿಗೆ ಲೈಂಗಿಕ ಪರಿಶುದ್ಧತೆಯ ಪ್ರಕ್ರಿಯೆಯನ್ನು ನಾನು ನಡೆಸಿದ್ದೇನೆ. ಗಂಡನ ಅಂತ್ಯ ಸಂಸ್ಕಾರಕ್ಕೆ ಮುನ್ನವೇ ಈ ಪ್ರಕ್ರಿಯೆ ನಡೆಯಬೇಕೆಂಬ ನಂಬಿಕೆ, ಸಂಪ್ರದಾಯವಿದೆ. ಅಂತೆಯೇ ಅನೇಕ ವಿಧವೆಯರೊಂದಿಗೂ ನಾನು ಸೆಕ್ಸ್ ನಡೆಸಿದ್ದೇನೆ.
ಧಾರ್ಮಿಕವಾಗಿ ಪವಿತ್ರವೆಂದು ತಿಳಿಯಲಾಗಿರುವ ಈ ಲೈಂಗಿಕ ಪರಿಶುದ್ಧತೆಯ ಪ್ರಕ್ರಿಯೆಯನ್ನು ಹುಡುಗಿಯರಾಗಲೀ, ಅವರ ತಾಯಂದಿರಾಗಲೀ, ಮಹಿಳೆಯರಾಗಲೀ ಅಥವಾ ವಿಧವೆಯರಾಗಲೀ, ಯಾರೇ ಆದರೂ ನಿರಾಕರಿಸಿದರೆ, ಒಲ್ಲೆ ಎಂದರೆ, ಅವರನ್ನು ಪ್ರಕೃತಿಯಲ್ಲಿರುವ ದುಷ್ಟ ಶಕ್ತಿಗಳು ನಾಶಮಾಡುತ್ತವೆ ಎಂಬ ನಂಬಿಕೆ ಇರುವುದರಿಂದ ಈ ಪದ್ಧತಿ ಇಂದಿಗೂ ಅನೂಚಾನವಾಗಿ ನಡೆದುಕೊಂಡು ಬಂದಿದೆ.
ಲೈಂಗಿಕ ಪರಿಶುದ್ಧತೆಯ ಸಂಪ್ರದಾಯದಿಂದ ಹುಡುಗಿಯರು ಮಹಿಳೆಯರು ಉತ್ತಮ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯವಾಗಿದೆ; ಉತ್ತಮ ಪತ್ನಿಯರಾಗಿರಲು ಅನುಕೂಲವಾಗಿದೆ ಮಾತ್ರವಲ್ಲ ಅವರು ತಮ್ಮ ಗಂಡಂದಿರಿಗೆ ಯೋಗ್ಯವಾದ ರೀತಿಯಲ್ಲಿ ಲೈಂಗಿಕ ಆನಂದ ನೀಡಲು ಸಾಧ್ಯವಾಗಿದೆ.
-ಉದಯವಾಣಿ
Comments are closed.