ರೊಬೋಟ್‌ಗಳು ಇಂದು ದೈನಂದಿನ ಕೆಲಸ ಕಾರ್ಯಗಳ ಭಾಗವಾಗಿಬಿಟ್ಟಿವೆ. ಈಗ ಅಡುಗೆ ಮಾಡುವುದಕ್ಕೂ ರೊಬೋಟ್ ಅನ್ನು ಅವಲಂಬಿಸುವ ಕಾಲ ದೂರವಿಲ್ಲ. ಏಕೆಂದರೆ ಜರ್ಮನಿಯ ಎಫ್ ಝಡ್‌ಐ ಕಂಪನಿಯ ವಿಜಾnನಿಗಳು ಬಾಣಸಿಗ ರೊಬೋಟ್‌ವೊಂದನ್ನು ತಯಾರಿಸಿದ್ದಾರೆ.
ಬ್ರಾಟ್ವರ್ಸ್ಡ್ ಬಾಟ್ ಹೆಸರಿನ ಈ ರೊಬೋಟ್ ಸಾಸೇಜ್ ಎಂಬ ಮಾಂಸದ ಖ್ಯಾದ್ಯವನ್ನು ಅತಿ ಸುಲಭವಾಗಿ ತಯಾರಿಸಿ ಗ್ರಾಹಕರಿಗೆ ಉಣಬಡಿಸುತ್ತದೆ. ಖಾದ್ಯವನ್ನು ಆರ್ಡರ್ ಮಾಡಲು ಗ್ರಾಹಕರು ತಮ್ಮ ಹೆಸರನ್ನು ಟ್ಯಾಬ್ ಮೇಲೆ ಬರೆಯಬೇಕು. ತಕ್ಷಣವೇ ಇಂತಿಷ್ಟು ಹೊತ್ತಿನಲ್ಲಿ ಖಾದ್ಯ ತಯಾರಾಗುತ್ತದೆ ಎಂದು ಬಾಣಸಿಗ ರೊಬೋಟ್ ಹೇಳಿಬಿಡುತ್ತದೆ. ಈ ವೇಳೆ, ಮೀಸೆ ಚಿತ್ರ ಇರುವ ಇನ್ನೊಂದು ಟ್ಯಾಬ್ ಕಾಯುತ್ತಿರುವ ಗ್ರಾಹಕರನ್ನು ಮಾತನಾಡಿಸುತ್ತದೆ. ಬ್ರಾಟ್ವರ್ಸ್ಡ್ ಬಾಟ್‌ಗೆ ಒಂದು ರೊಬೋಟಿಕ್ ಕೈ ಮತ್ತು ಹಿಡಿಕೆಯನ್ನು ಅಳವಡಿಸಲಾಗಿದೆ.
ಅದು ಸಾಸೇಜ್ ಖಾದ್ಯವನ್ನು ಬೇಯಿಸಿ ಪ್ಲೇಟ್‌ಗೆ ಹಾಕುವ ಕೆಲಸವನ್ನು ಮಾಡುತ್ತದೆ. ಆದರೆ, ಸಾಸೇಜ್ ಬೆಂದಿದೆಯೇ ಇಲ್ಲವೇ ಎಂದು ರೋಬೋಟ್‌ಗೆ ಹೇಗೆ ತಿಳಿಯುತ್ತದೆ ಎಂದ ಪ್ರಶ್ನೆ ಮೂಡಬಹುದು.
ರೊಬೋಟ್ ಖಾದ್ಯ ಬೇಯಿಸುವುದನ್ನು ವೀಕ್ಷಿಸಲೆಂದೇ ಎರಡು ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಈ ಕ್ಯಾಮರಾಗಳು ಅಡುಗೆ ಕಾರ್ಯಗಳ ಮೇಲೆ ಕಣ್ಣಿಡುತ್ತವೆ. ಸಾಸೇಜ್‌ಗಳು ಸರಿಯಾಗಿ ಬೆಂದ ಬಳಿಕ ಅದನ್ನು ತೆಗದು ಪ್ಲೇಟ್‌ಗೆ ಹಾಕುವಂತೆ ಸೂಚನೆ ನೀಡುತ್ತವೆ. ಬೆಂದ ಸಾಸೇಜ್ ಗಳನ್ನು ರೊಬೋಟ್ ಇಕ್ಕಳದ ಕೈನೊಂದಿಗೆ ಹೆಕ್ಕಿ ಪ್ಲೇಟ್‌ಗೆ ಹಾಕಿ ಗ್ರಾಹಕರಿಗೆ ಉಣಬಡಿಸುತ್ತದೆ.
ಬರ್ಲಿನ್‌ನ ಬಾಡೆನ್ ವುರ್ಟೆಂಬರ್ಗ್‌ನ ಸರ್ಕಾರ ಆಯೋಜಿಸಿದ್ದ ಪಾರ್ಟಿಯೊಂದರ ವೇಳೆ, ಬ್ರಾಟ್ವರ್ಸ್ಡ್ ಬಾಟ್ ರೊಬೋಟ್‌ನ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು. ಒಟ್ಟು 200 ಸಾಸೇಜ್‌ಗಳನ್ನು ಮಾಡಿಕೊಡುವಲ್ಲಿ ರೊಬೋಟ್ ಯಶಸ್ವಿಯಾಗಿದೆ. ಸಾಸೇಜ್ ಅನ್ನು ಸೇವಿಸಿದ ಜನರು ರೊಬೋಟ್‌ನ ಅಡುಗೆಯನ್ನು ಬಾಯಿತುಂಬಾ ಹೊಗಳಿದ್ದಾರೆ.
-ಉದಯವಾಣಿ
Comments are closed.