ಅಂತರಾಷ್ಟ್ರೀಯ

ನೇಪಾಳದ ನೂತನ ಪ್ರಧಾನಿ ಪುಷ್ಪ ಕಮಲ್ ದಹಲ್ ‘ಪ್ರಚಂಡ’

Pinterest LinkedIn Tumblr

03-prachanda-webಕಾಠ್ಮಂಡು: ನೇಪಾಳದ ನೂತನ ಪ್ರಧಾನ ಮಂತ್ರಿಯಾಗಿ ಮಾವೋವಾದಿ ಬಂಡುಕೋರ ಮುಖ್ಯಸ್ಥ ಪ್ರಚಂಡ ಎಂದೇ ಖ್ಯಾತರಾದ ಪುಷ್ಪ ಕಮಲ್ ದಹಲ್ (61) ಅವರನ್ನು ನೇಪಾಳೀ ಸಂಸತ್ತು ಬುಧವಾರ ಆಯ್ಕೆ ಮಾಡಿತು. ಅವಿಶ್ವಾಸದ ಗೊತ್ತುವಳಿಯಲ್ಲಿ ಪರಾಭವಗೊಳ್ಳುವ ಸಾಧ್ಯತೆಯಿಂದ ಪಾರಾಗಲು ಕೆ.ಪಿ. ಒಲಿ ಅವರು ರಾಜೀನಾಮೆ ನೀಡಿದ ಬಳಿಕ ಸಂಸತ್ತು ಪ್ರಚಂಡ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿತು.

ಹಿಂದೂ ಅರಸೊತ್ತಿಗೆಯನ್ನು ಕಿತ್ತೊಗೆಯಲು ದಶಕಗಳ ಕಾಲ ಬಂಡಾಯ ಹೋರಾಟ ನಡೆಸಿದ್ದ ಪ್ರಚಂಡ, 1990ರಲ್ಲಿ ಬಹುಪಕ್ಷೀಯ ಪ್ರಜಾಪ್ರಭುತ್ವವನ್ನು ಹಿಮಾಲಯ ತಪ್ಪಲಿನ ರಾಷ್ಟ್ರ ಅಂಗೀಕರಿಸಿದ ಬಳಿಕದ 26 ವರ್ಷಗಳಲ್ಲಿ 24ನೆಯ ಪ್ರಧಾನಿಯಾಗಿದ್ದಾರೆ. 595 ಸದಸ್ಯ ಬಲದ ಸಂಸತ್ತಿನಲ್ಲಿ ಮತ ಚಲಾವಣೆಯಾದ 573 ಮತಗಳಲ್ಲಿ 363 ಮತಗಳು ಮತಗಳು ಪ್ರಚಂಡ ಅವರಿಗೆ ಲಭಿಸಿವೆ ಎಂದು ಸಭಾಧ್ಯಕ್ಷ ಓನ್ಸಾರಿ ಘರ್ತಿ ನುಡಿದರು.

239 ವರ್ಷಗಳ ಅರಸೊತ್ತಿಗೆ ಅಂತ್ಯಗೊಂಡ ಬಳಿಕದ 8 ವರ್ಷಗಳಲ್ಲಿ ಆಯ್ಕೆಯಾದ 8ನೆಯ ಪ್ರಧಾನಿಯಾಗಿದ್ದಾರೆ ಪುಷ್ಪ ಕಮಲ್ ದಹಲ್. 2008ರಬ ರಾಷ್ಟ್ರೀಯ ಚುನಾವಣೆಯಲ್ಲಿ ಹಿಂದಿನ ಗೆರಿಲ್ಲಾ ಯೋಧರ ಪಕ್ಷ ಬಹುಮತ ಗಳಿಸಿದಾಗ ಮೊದಲ ಬಾರಿಗೆ ನೇಪಾಳದ ಪ್ರಧಾನಿಯಾಗಿದ್ದ ಪ್ರಚಂಡ ಇದೀಗ ಎರಡನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

Comments are closed.