ಡಾಕಾ(ಪಿಟಿಐ): ಸರ್ಕಾರದ ಪರ ಮತ್ತು ವಿರುದ್ಧವಾಗಿದ್ದ ಅನ್‌ಲೈನ್ ಪೋರ್ಟಲ್‌ಗಳು ಮತ್ತು 30 ಸುದ್ದಿ ಜಾಲತಾಣಗಳ ಪ್ರಸಾರವನ್ನು ಬಾಂಗ್ಲಾ ಸರ್ಕಾರ ರದ್ದುಗೊಳ್ಳಿಸಿದೆ.
ಬಾಂಗ್ಲಾದ ರಾಷ್ಟ್ರೀಯ ದೂರಸಂಪರ್ಕ ಮತ್ತು ನಿಯಂತ್ರಣ ಅಯೋಗ(ಬಿಟಿಆರ್‌ಸಿ) ಸರ್ಕಾರದ ಆದೇಶದಂತೆ ಸುದ್ದಿ ಜಾಲತಾಣಗಳ ಪ್ರಸಾರವನ್ನು ರದ್ದುಗೊಳ್ಳಿಸಿರುವುದಾಗಿ ತಿಳಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಬಿಟಿಆರ್‌ಸಿ ಅಧ್ಯಕ್ಷ ಷಹಜಹನ್ ಮಹಮ್ಮದ್ ಯಾವುದೇ ಪ್ರತಿಕ್ರಿಯೇ ನೀಡಿಲ್ಲ.
ಸರ್ಕಾರದ ಪರ ಮತ್ತು ವಿರುದ್ಧವಾಗಿ ಕಾರ್ಯ ನಿರ್ವಹಿಸುತ್ತಿದ ಶೇರ್ ಷಾ ಮತ್ತು ಹಮರಾದೇಶ್ ಬಂಗಾಳಿ ಅನ್‌ಲೈನ್ ಸುದ್ದಿ ಜಾಲತಾಣಗಳನ್ನು ಬಾಂಗ್ಲಾ ಸರ್ಕಾರ 2013ರಲ್ಲಿಯೂ ರದ್ದುಗೊಳ್ಳಿಸಿತ್ತು.
ದೇಶದಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತಿದೆ ಎಂಬ ಕಾರಣದಿಂದ ಹಮರದೇಶ್ ಅನ್ ಲೈನ್ ಸುದ್ದಿ ಪತ್ರಿಕೆಯ ಪರವಾನಗಿಯನ್ನು ಬಾಂಗ್ಲಾ ಸರ್ಕಾರ ರದ್ದುಗೊಳ್ಳಿಸಿದೆ.
ಕಳೆದ ತಿಂಗಳು ನಗರದ ರೆಸ್ಟೋರಂಟ್ ಕೆಫೆ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 22 ಮಂದಿ ಮೃತ್ತಪಟ್ಟಿದ್ದರು. ಈ ಘಟನೆಯ ನಂತರ ಸರ್ಕಾರ ದೂರದರ್ಶನ ಪ್ರಸಾರಕ್ಕೆ ನಿಷೇಧ ಏರಿದೆ.
ಉಗ್ರರ ದಾಳಿ ನಡೆದ ಸಂದರ್ಭದಲ್ಲಿ ಸರ್ಕಾರದ ಕಾರ್ಯ ವೈಕಾರಿಯ ಬಗ್ಗೆ ಸುದ್ದಿ ವಾಹಿನಿಗಳು ನೇರ ಪ್ರಸಾರ ಮಾಡಿದ್ದವು. ಮಾಧ್ಯಮಗಳ ನಡೆ ಬಗ್ಗೆ ಬಾಂಗ್ಲಾ ಪ್ರಧಾನಿ ಶೇಖ್ ಹಸೀನ್ ಸಾರ್ವಜನಿಕವಾಗಿ ಟೀಕಿಸಿದ್ದಾರೆ.
Comments are closed.