ಅಂತರಾಷ್ಟ್ರೀಯ

ಉದ್ದ ಗಡ್ಡ ಬಿಟ್ಟು ಗಿನ್ನೆಸ್‌ ದಾಖಲೆ ಮಾಡಿದ ಸಿಖ್‌ ಯುವತಿ

Pinterest LinkedIn Tumblr

sikhಲಂಡನ್‌: ಹೆಣ್ಣಿಗೆ ಗಡ್ಡ, ಮೀಸೆ ಬರೋಕಿಲ್ಲ. ಗಡ್ಡ ಬಿಡೋದು ಬರೇ ಗಂಡಸರು ಎಂದು ಭಾವಿಸಿದ್ದರೆ ನಿಮ್ಮ ಊಹೆ ತಪ್ಪು. ಏಕೆಂದರೆ, ಬ್ರಿಟನ್‌ನ ಸಿಖ್‌ ಸಮುದಾಯದ ರೂಪದರ್ಶಿಯೊಬ್ಬರು 6 ಇಂಚು ಉದ್ದದ ಗಡ್ಡ ಬಿಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
24 ವರ್ಷದ ಬರ್ಕ್‌ಶೈರ್‌ನ ಸ್ಲಾಗ್‌ ನಿವಾಸಿ ಹರ್ಮಾನ್‌ ಕೌರ್‌ ಉದ್ದದ ದಾಡಿ ಹೊಂದಿರುವ ಅತಿ ಕಿರಿಯ ಮಹಿಳೆ ಎಂದು ಗಿನ್ನೆಸ್‌ ದಾಖಲೆ ಸೇರಿದ್ದಾರೆ.
ಕೌರ್‌ಗೆ ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್‌ ಖಾಯಿಲೆ ಇದೆ. ಇದರಿಂದಾಗಿ ಅವರ ಮುಖದ ಮೇಲೆ ಸಾಮಾನ್ಯಕ್ಕಿಂತ ಹೆಚ್ಚು ಕೂದಲು ಬೆಳೆಯುತ್ತದೆ.

Comments are closed.