ಅಂತರಾಷ್ಟ್ರೀಯ

ಸ್ಯಾಮ್ ಸಂಗ್ ಗೆ -800 ಕೋಟಿ ರೂ. ದಂಡ !

Pinterest LinkedIn Tumblr

samsung

ವಾಷಿಂಗ್ಟನ್: ವಿಶ್ವದ ಎರಡು ಪ್ರಮುಖ ಸ್ಮಾರ್ಟ್ಫೋನ್ ತಯಾರಕ ಕಂಪನಿಗಳಾದ ಆಪಲ್ ಹಾಗೂ ಸ್ಯಾಮ್ಂಗ್ನ ಪೇಟೆಂಟ್ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಸ್ಯಾಮ್ಂಗ್ಗೆ ಅಮೆರಿಕದ ನ್ಯಾಯಾಲಯ 800 ಕೋಟಿ ರೂ. ದಂಡ ವಿಧಿಸಿದೆ.

ಈ ಹಿಂದೆ ನ್ಯಾಯಾಲಯ ಸ್ಯಾಮ್ಂಗ್ ವಿರುದ್ಧದ ಆಪಲ್ ಆರೋಪಗಳನ್ನು ತಳ್ಳಿಹಾಕಿತ್ತು. ಈ ಬಗ್ಗೆ ಮರುವಿಚಾರಣೆಗೆ ಆಪಲ್ ಆಗ್ರಹಿಸಿದ್ದ ಹಿನ್ನೆಲೆಯಲ್ಲಿ ಈ ತೀರ್ಪು ಪ್ರಕಟಿಸಲಾಗಿದೆ. ಅನ್ಲಾಕ್ ಮಾಡಲು ಸ್ಲೈಡ್ ಮಾಡುವುದು, ಅಟೋಕರೆಕ್ಷನ್ ಸೌಲಭ್ಯ ಸೇರಿದಂತೆ ಹಲವು ಆಪಲ್ ವೈಶಿಷ್ಟ್ಯಳನ್ನು ಸ್ಯಾಮ್ಂಗ್ ನಕಲು ಮಾಡಿದೆ ಎಂದು ಆರೋಪಿಸಲಾಗಿತ್ತು.

ಆದರೆ ಈ ಸೌಲಭ್ಯಗಳು ಆಪಲ್ಗಿಂತ ವಿಭಿನ್ನವಾಗಿವೆ ಎಂಬುದನ್ನು ಸಾಬೀತುಪಡಿಸಲು ಸ್ಯಾಮ್ಂಗ್ ವಿಫಲವಾಗಿದೆ. ಈ ಪ್ರಕರಣದಲ್ಲಿ 15 ಸಾವಿರ ಕೋಟಿ ರೂ. ದಂಡ ವಿಧಿಸುವಂತೆ ಆಪಲ್ ಆಗ್ರಹಿಸಿತ್ತು. ಇನ್ನೊಂದೆಡೆ ಇಂಥದ್ದೇ ಇನ್ನೊಂದು ಪ್ರಕರಣದಲ್ಲಿ 3500 ಕೋಟಿ ರೂ. ದಂಡ ಪಾವತಿ ಮಾಡುವಂತೆ ಸ್ಯಾಮ್ಂಗ್ಗೆ ಕೋರ್ಟ್ ತೀರ್ಪು ನೀಡಿದ್ದು, ಇದರ ಮರುವಿಚಾರಣೆಯೂ ಅಮೆರಿಕದ ನ್ಯಾಯಾಲಯದಲ್ಲಿ ನಡೆಯುತ್ತಿದೆ.

Comments are closed.