ಇಸ್ಲಾಮಾಬಾದ್: 47 ಮಂದಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ ಪಾಕಿಸ್ತಾನ ಅಂತರಾಷ್ಟ್ರೀಯ ವಿಮಾನ ಸಂಸ್ಥೆಯ (ಪಿಐಎ) ವಿಮಾನ ಬುಧವಾರ ಪತನವಾಗಿದೆ.
ಚಿತ್ರಾಲ್‍ನಿಂದ ಸಂಜೆ 3.30ಕ್ಕೆ ಹೊರಟಿದ್ದ ಪಿಕೆ-661 ವಿಮಾನ ಟೇಕ್ ಆಫ್ ಆಗಿದ್ದ ಕೆಲವೇ ಕ್ಷಣಗಳಲ್ಲಿ ನಿಯಂತ್ರಣ ಕಳೆದುಕೊಂಡು ಕಣ್ಮರೆಯಾಗಿತ್ತು.
ವಿಮಾನದಲ್ಲಿ 5 ಮಂದಿ ವಿಮಾನ ಸಿಬ್ಬಂದಿಗಳು ಸೇರಿದಂತೆ 47 ಮಂದಿ ಇದ್ದರು ಎಂದು ವಿಮಾನ ಸಂಸ್ಥೆ ಹೇಳಿದೆ.
ಪಾಕಿಸ್ತಾನ ಅಂತರಾಷ್ಟ್ರೀಯ ವಿಮಾನ ಸಂಸ್ಥೆಯ ಪಿಕೆ-661 ವಿಮಾನ ಟೇಕಾಫ್ ಆದ ನಂತರ ನಿಯಂತ್ರಣ ಕಳೆದುಕೊಂಡಿದೆ. ವಿಮಾನವನ್ನು ಪತ್ತೆ ಹಚ್ಚುವ ಕಾರ್ಯಗಳು ಮುಂದುವರಿದಿದೆ. ವಿಮಾನದಲ್ಲಿ 40ಕ್ಕಿಂತಲೂ ಹೆಚ್ಚು ಪ್ರಯಾಣಿಕರು ಇದ್ದರು ಎಂದು ಪಿಐಎ ವಕ್ತಾರ ಡೇನಿಯಲ್ ಗಿಲಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದಾಗ್ಯೂ, ವಿಮಾನವು ಮಜಾಬ್ ಮತ್ತು ಪಿಪ್‍ಲಿಯಾನ್ ನಡುವೆ ಹವೇಲಿನ್ ಬಳಿ ಪತನಗೊಂಡಿದೆ ಎಂದು ಅಬೊಟಾಬಾದ್ ಡಿಪಿಒ ದೃಢೀಕರಿಸಿದೆ.
ಪಿಐಎ ಸಹಾಯವಾಣಿ ಸಂಖ್ಯೆ: 0092-21-99044890, 0092-21-99044376 ಮತ್ತು 0092-21-99044394
Comments are closed.