ಬರ್ಲಿನ್: ವಲಸಿಗರಾಗಿ ಜರ್ಮನಿ ಪ್ರವೇಶಿಸಿದ ಹಲವು ಮುಸ್ಲಿಂ ನಿರಾಶ್ರಿತರು ಕ್ರೖೆಸ್ತಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಹೆಚ್ಚಿನವರು ಮತಾಂತರಗೊಂಡ ನಂತರ ಜರ್ಮನಿಯಲ್ಲಿ ನೆಲೆ ಕಂಡುಕೊಂಡಿದ್ದಾರೆ. ಕೆಲವು ಮತಾಂತರಗೊಂಡ ಮುಸ್ಲಿಮರು ಸ್ವದೇಶಕ್ಕೆ ಮರಳಿದ್ದಾರೆ. ಇತ್ತೀಚೆಗೆ ಬರ್ಲಿನ್ನ ಇವಾಂಜೆಲಿಕಲ್ ಪ್ರದೇಶದಲ್ಲಿ ಮೂವರು ಮುಸ್ಲಿಂ ನಿರಾಶ್ರಿತರನ್ನು ಕ್ರೖೆಸ್ತಮತಕ್ಕೆ ಮತಾಂತರಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಅಲ್ಲಿನ ಚರ್ಚ್ಗಳು, ಕ್ರೖೆಸ್ತಧರ್ಮಕ್ಕೆ ಮತಾಂತರಗೊಳ್ಳುವ ಮೂಲಕ ನಿರಾಶ್ರಿತರು ಹೊಸ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ ಎಂದಿವೆ.
ಹೆಚ್ಚಿನ ಮುಸ್ಲಿಂ ವಲಸಿಗರು ಕ್ರೖೆಸ್ತಧರ್ಮಕ್ಕೆ ಸೇರಲೆಂದೇ ಜರ್ಮನಿಗೆ ಬರುತ್ತಾರೆ. ಕ್ರೖೆಸ್ತಧರ್ಮಕ್ಕೆ ಮತಾಂತರಗೊಳ್ಳುವ ಮೂಲಕ ಧಾರ್ವಿುಕ ಸ್ವಾತಂತ್ರ್ಯ ಹೊಂದುತ್ತಾರೆ. ಇರಾಕ್, ಇರಾನ್, ಅಫ್ಘಾನಿಸ್ತಾನ, ಸಿರಿಯಾ ರಾಷ್ಟ್ರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ ಎಂದು ಕ್ರೖೆಸ್ತ ಪಾದ್ರಿ ಮ್ಯಾಥಿಸ್ ಲಿಂಕ್ ತಿಳಿಸಿದ್ದಾರೆ. ಐಸಿಸ್ ಪ್ರಾಬಲ್ಯ ಹೆಚ್ಚಾದಂತೆ ಆಶ್ರಯ ಹುಡುಕಿಕೊಂಡು ಜರ್ಮನಿ ಪ್ರವೇಶಿಸುತ್ತಿರುವ ನಿರಾಶ್ರಿತ ಮುಸ್ಲಿಂ ಸಂಖ್ಯೆ ಹೆಚ್ಚಾಗಿದೆ. ಕಳೆದ ವರ್ಷ ಸಿರಿಯಾ, ಇರಾಕ್ ಅಫ್ಘಾನಿಸ್ತಾನದಿಂದ 9 ಲಕ್ಷ ನಿರಾಶ್ರಿತರು ಆಗಮಿಸಿದ್ದಾರೆ
Comments are closed.