ವಾಷಿಂಗ್ಟನ್: ಎಚ್1ಬಿ ವಿಸಾ ಹೊಂದಿದ ವಿದೇಶಿಗರನ್ನು ಅಮೆರಿಕದಿಂದ ಹೊರಗೆ ಕಳುಹಿಸಿ ಸ್ವದೇಶಿಗರಿಗೆ ಉದ್ಯೋಗ ಕಲ್ಪಿಸಲು ಶ್ರಮಿಸುವುದಾಗಿ ಅಮೆರಿಕ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ವಿದೇಶಿಗರೇ ಹೆಚ್ಚಿರುವ ಡಿಸ್ನಿ ವರ್ಲ್ಡ್ ಮತ್ತಿತರ ಅಮೆರಿಕನ್ ಸಂಸ್ಥೆಗಳ ಪ್ರಕರಣಗಳನ್ನು ಉದಾಹರಣೆ ನೀಡಿದ ಟ್ರಂಪ್, ಚುನಾವಣೆ ಪ್ರಚಾರದ ಸಂದರ್ಭ ವಿದೇಶಿಗರಿಂದಾಗಿ ಉದ್ಯೋಗ ಕಳೆದುಕೊಂಡಿರುವ ಅಮೆರಿಕದ ಉದ್ಯೋಗಿಗಳ ಜತೆ ಕಾಲ ಕಳೆದಿದ್ದೇನೆ. ಇಂತಹ ಸ್ಥಿತಿ ಮುಂದೆ ಬಾರದಂತೆ ತಡೆಗಟ್ಟಲು ಪ್ರಯತ್ನಿಸುತ್ತೇನೆ. ವಿದೇಶಿಗರಿಗೆ ಅಮೆರಿಕ ಕಂಪನಿಗಳು ಉದ್ಯೋಗ ನೀಡುವುದನ್ನು ಒಪ್ಪುವುದಿಲ್ಲ ಎಂದು ಲೋವಾದಲ್ಲಿ ಬೆಂಬಲಿಗರನ್ನು ಉದ್ದೇಶಿಸಿದ ಭಾಷಣದಲ್ಲಿ ತಿಳಿಸಿದ್ದಾರೆ.
ಅಕ್ರಮ ವಲಸೆ ತಡೆಗಟ್ಟುವ ಮೂಲಕ ಮಾದಕ ಪದಾರ್ಥಗಳು ರಾಷ್ಟ್ರದೊಳಗೆ ನುಸುಳದಂತೆ ಎಚ್ಚರಿಕೆ ವಹಿಸಲಾಗುವುದು. ಅಮೆರಿಕದ ಯುವಕರನ್ನು ಮಾದಕ ವ್ಯಸನಿಗಳಾಗಂತೆ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಟ್ರಂಪ್ ತಿಳಿಸಿದರು. ವಿದೇಶಿಗರು ಅಮೆರಿಕನ್ನರ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಅಧ್ಯಕ್ಷರಾದರೆ ಮೊದಲು ಇದಕ್ಕೆ ತಡೆಯೊಡ್ಡುವುದಾಗಿ ಟ್ರಂಪ್ ಚುನಾವಣೆ ಪ್ರಚಾರಾಂದೋಲನದಲ್ಲಿ ಹೇಳುತ್ತಲೇ ಬಂದಿದ್ದರು
Comments are closed.