ಫ್ಲೋರಿಡಾ: ಮನೆಯಲ್ಲಿ ಮಾಡಬೇಕಾದುದನ್ನು ಬೀದಿಗೆ ಬಂದು ಮಾಡಿದುದಕ್ಕಾಗಿ ದಂಪತಿಗಳಿಬ್ಬರು ಪೊಲೀಸರ ಅತಿಥಿಯಾಗಿದ್ದಾರೆ.
ಸಾರ್ವಜನಿರಿಂದ ಕೂಡಿದ್ದ ನಾರ್ತ್ ಆ್ಯಂಡ್ ಮಿರರ್ ಲೇಕ್ ಡ್ರೈವ್ ನಾರ್ತ್‌ನ ಪಾರ್ಕ್ ಬಳಿಯಲ್ಲೇ ರಾತ್ರಿ 10.30 ರ ವೇಳೆಗೆ ರಸ್ತೆ ಬದಿ ಕಾಮದಾಟ ಆಡುತ್ತಿದ್ದ ದಂಪತಿಯನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಲಜ್ಜೆ ಮರೆತು ರಸ್ತೆ ಬದಿಯಲ್ಲೇ ಸೆಕ್ಸ್ ನಡೆಸುತ್ತಿದ್ದ 26 ರ ಹರೆಯದ ಆಶ್ಲೇ ವೆಟ್‌ಜೆಲ್ ಮತ್ತು ಆಕೆಯ ಪತಿ 50 ರ ಹರೆಯದ ಹೆನ್ರಿ ನಿಬ್‌ಲ್ಯಾಕ್ ನನ್ನು ದೂರಿನನ್ವಯ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಬಂಧಿಸಿ ಸಾರ್ವಜನಿಕವಾಗಿ ಅಶ್ಲೀಲ ವರ್ತನೆ ತೋರಿದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೋರ್ಟ್‌ಗೆ ಇಬ್ಬರನ್ನು ಹಾಜರು ಪಡಿಸಲಾಗಿದ್ದು, ಭಾರಿ ದಂಡ ತೆತ್ತು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಇಬ್ಬರ ವಿರುದ್ಧವೂ ಕ್ರಿಮಿನಲ್ ಕೇಸುಗಳು ಈ ಹಿಂದೆ ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.