ಅಂತರಾಷ್ಟ್ರೀಯ

ಫೇಸ್‌ಬುಕ್‌ನಲ್ಲಿ ಪ್ರೇಯಸಿಯ 150 ನಗ್ನ ಫೋಟೋ

Pinterest LinkedIn Tumblr


ಕೆಂಟ್: ತೊರೆದ ಪ್ರೇಯಸಿಯ ಮೇಲೆ ಸೇಡು ತೀರಿಸಿಕೊಳ್ಳಲು ವ್ಯಕ್ತಿಯೋರ್ವ ಆಕೆಯ 150 ಬೆತ್ತಲೆ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಹೇಯ ಕೃತ್ಯ ಇಂಗ್ಲೆಂಡ್‌ನ ಕೆಂಟ್‌ನಲ್ಲಿ ನಡೆದಿದೆ.

ಘಟನೆಯ ವಿವರ: ಮಾರ್ಗೆಟ್‌ನ ನಿವಾಸಿ ಬೈಗ್ರೇವ್, ಹೆರಾಯ್ ಎಂಬ ಯುವತಿಯ ಜತೆ 2013ರಿಂದ ಸಹಜೀವನ ನಡೆಸುತ್ತಿದ್ದ. ಅವರಿಬ್ಬರು ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಒಂದೆರಡು ವರ್ಷ ಎಲ್ಲವೂ ಚೆನ್ನಾಗಿಯೇ ಇತ್ತು. 2015ರಿಂದಿಚೀಗೆ ಬೈಗ್ರೇವ್ ಹೆರಾಯ್ ಮೇಲೆ ಅನುಮಾನ ವ್ಯಕ್ತ ಪಡಿಸಲು ಪ್ರಾರಂಭಿಸಿದ್ದ. ಇದರಿಂದ ಬೇಸತ್ತ ಯುವತಿ ಆತನಿಂದ ದೂರವಾಗಿದ್ದಳು.

ಮರಳಿ ತನ್ನಲ್ಲಿಗೆ ಮರಳಿ ಬರುವಂತೆ ಪ್ರಿಯತಮ ಎಷ್ಟೇ ಬೇಡಿಕೊಂಡರು ಹೆರಾವ್ ತಿರಸ್ಕರಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಬೈಗ್ರೇವ್ ಆಕೆಯ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಿ 150ಕ್ಕಿಂತ ಹೆಚ್ಚು ಅಶ್ಲೀಲ ಫೋಟೋಗಳನ್ನು ಪೋಸ್ಟ್ ಮಾಡಿದ್ದಾನೆ. ಜತೆಗೆ ಆಕೆಯ ಬಾಸ್, ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆಲ್ಲಾ ಇವನ್ನು ಟ್ಯಾಗ್ ಮಾಡಿದ್ದಾನೆ.

ಇದರಿಂದ ಅಪಮಾನಕ್ಕೀಡಾದ ಯುವತಿ ಕೆಲಸವನ್ನೇ ತೊರೆದಿದ್ದಾಳೆ.

ಸದ್ಯ ಆರೋಪಿ ಜೈಲಿನ ಕಂಬಿ ಎಣಿಸುತ್ತಿದ್ದಾನೆ.

Comments are closed.