ವಾಷಿಂಗ್ಟನ್: ತಾಲಿಬಾನ್ ಜತೆ ಮಾತುಕತೆ ಸಾಧ್ಯವೇ ಇಲ್ಲ. ಈ ಉಗ್ರ ಸಂಘಟನೆಯನ್ನು ಸಂಪೂರ್ಣ ಧ್ವಂಸಗೊಳಿಸುವುದೇ ನಮ್ಮ ಗುರಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಗುಡುಗಿದ್ದಾರೆ.
ಶ್ವೇತ ಭವನದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ರಾಯಭಾರಿಗಳೊಡನೆ ನಡೆದ ಸಭೆಯಲ್ಲಿ ಟ್ರಂಪ್,”ತಾಲಿಬಾನಿಗಳು ಮುಗ್ಧ ಜನರನ್ನು ಕೊಂದಿದ್ದಾರೆ. ಅಫಘಾನಿಸ್ತಾನದಲ್ಲಿ ಮಕ್ಕಳು, ಮಹಿಳೆಯರೆನ್ನದೆ ಇಡೀ ಕುಟುಂಬದ ಜನರನ್ನು ಹತ್ಯೆ ಮಾಡುತ್ತಿದ್ದಾರೆ. ನಾವು ಅವರೊಂದಿಗೆ ಮಾತನಾಡಲು ಬಯಸುವುದಿಲ್ಲ. ಈ ಹಿಂದೆ ಮಾತುಕತೆ ಕುರಿತು ಯೋಚಿಸಿದ್ದೆವು. ಆದರೆ ಈಗ ಕಾಲ ಮುಗಿದಿದೆ,”ಎಂದು ತಾಲಿಬಾನ್ ವಿರುದ್ಧ ಕಿಡಿಕಾರಿದರು.
ಇತ್ತೀಚೆಗೆ ಅಫಘಾನಿಸ್ತಾನದ ಕಾಬೂಲ್‌ನಲ್ಲಿ ತಾಲಿಬಾನ್ ನಡೆಸಿದ ದಾಳಿಯಲ್ಲಿ 130ಕ್ಕೂ ಹೆಚ್ಚು ಜನ ನಾಗರಿಕರು ಮೃತಪಟ್ಟ ನಂತರ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ”ಇದುವರೆಗೂ ಯಾರಿಗೂ ಸಾಧ್ಯವಾಗದಿರುವುದನ್ನು ಸಾಧಿಸಲು ನಾವು ಹೊರಟಿದ್ದೇವೆ. ಅವರನ್ನು ಸಂಪೂರ್ಣವಾಗಿ ನಾಶ ಮಾಡುತ್ತೇವೆ,”ಎಂದು ಟ್ರಂಪ್ ಗುಡುಗಿದರು.
Comments are closed.