ಮನೆಯಲ್ಲಿ ಯಾವುದೋ ಕಾರ್ಯಕ್ರಮ ಇರುತ್ತದೆ ಅಂದುಕೊಳ್ಳಿ ಅಥವಾ ಆರಾಮವಾಗಿ ನಿದ್ದೆ ಮಾಡುತ್ತಿರಬೇಕಾದರೆ ಹಾವು ಬಂದರೆ ಹೌಹಾರದೆ ಇರುತ್ತೀರಾ ನೀವು? ಸಾಧ್ಯವೇ ಹಾವೆಂದರೆ ಎಲ್ಲರಿಗೂ ಭಯ ಸಾಮಾನ್ಯ.
ಆದರೆ ಥೈಲ್ಯಾಂಡ್‌ನಲ್ಲಿ ನಡೆದ ಕತೆಯೇ ಬೇರೆ ಇದೆ. ಪಟ್ಟಾಯ ಎಂಬಲ್ಲಿ ಪ್ರವಾಸಿಗರನ್ನು ಕೊಂಡೊಯ್ಯುತ್ತಿದ್ದ ಬಸ್‌ನ ಕೆಳಭಾಗದಲ್ಲಿಯೇ ಹೆಬ್ಟಾವೊಂದು ಸೇರಿಕೊಂಡಿತ್ತು. ಅದನ್ನು ತೆಗೆಯಬೇಕಾದರೆ ಸ್ಥಳೀಯ ವನ್ಯ ಜೀವಿ ಸಂರಕ್ಷಣಾಧಿಕಾರಿ ಮತ್ತು ಸಿಬ್ಬಂದಿಯನ್ನೇ ಕರೆಸಿಕೊಳ್ಳಲಾಗಿತ್ತು. ಹೋಗಿ ಹೋಗಿ ಅದು ಸೇರಿಕೊಂಡದ್ದು ಎಲ್ಲಿ ಗೊತ್ತೇ? ಬಸ್‌ನ ಟೈರ್‌ನ ಮೇಲ್ಭಾಗದಲ್ಲಿ. ಚಾಲಕನಿಗೆ ಬಸ್ ಚಾಲನೆ ಮಾಡುವಾಗಏನೋ ಅಡ್ಡಿಯಾಗುತ್ತಿದೆ ಎಂದು ಅನಿಸಿತು. ಕೆಳಗಿಳಿದು ನೋಡಿದಾಗ ಟೈರ್‌ನ ಮೇಲ್ಭಾಗದಲ್ಲಿ ಹೆಬ್ಟಾವು ಬೆಚ್ಚನೆ ಕುಳಿತಿತ್ತು. ಕೂಡಲೇ ಪ್ರವಾಸಿಗರೆಲ್ಲರನ್ನೂ ಕೆಳಗಿಳಿಸಿ, ಅವರಿಗೆ ಬೇರೊಂದು ಬಸ್ ವ್ಯವಸ್ಥೆ ಮಾಡಲಾಯಿತು. ಇನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ಬಂದು ಹಾವನ್ನು ತೆಗೆಯಬೇಕಾದರೆ ಬಸ್‌ನ ಒಂದು ಭಾಗವನ್ನೇ ತುಂಡು ಮಾಡಿದ್ದಾರೆ.
-ಉದಯವಾಣಿ
Comments are closed.