ಮಾಸ್ಕೋ: ವೆಸ್ಟರ್ನ್ ಸೈಬಿರಿಯಾದ ಶಾಪಿಂಗ್ ಸೆಂಟರ್ ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 64 ಮಂದಿ ಸಾವನ್ನಪ್ಪಿದ್ದು, ಸುಮಾರು 69 ಮಂದಿ ನಾಪತ್ತೆಯಾಗಿದ್ದಾರೆ ಎಂದು ರಷ್ಯಾ ತನಿಖಾ ಸಮಿತಿ ತಿಳಿಸಿದೆ.
ಕೆಮೆರಾವೋನಲ್ಲಿರುವ ವಿಂಟರ್ ಚೆರ್ರಿ ಶಾಪಿಂಗ್ ಸೆಂಟರ್ ನಿಂದ ದಟ್ಟವಾದ ಹೊಗೆ ಬರುತ್ತಿರುವ ಫೋಟೋಗಳನ್ನು ರಷ್ಯಾದ ಟಿವಿಚಾನೆಲ್ ಗಳು ಬಿತ್ತರಿಸಿವೆ, ಭಾನುವಾರ ಮಧ್ಯಾಹ್ನ ಶಾಂಪಿಂಗ್ ಮಾಲ್ ನ ಮಲ್ಟಿಪ್ಲೆಕ್ಸ್ ಸಿನಿಮಾ ಮತ್ತು ಬೌಲಿಂಗ್ ಅಲ್ಲೆ ಗೇಮ್ ಬಳಿ ಅಪಾರ ಪ್ರಮಾಣದಲ್ಲಿ ಜನ ಜಂಗುಳಿ ಸೇರಿತ್ತು.
ಕೆಮೆರಾವೋ ಶಾಪಿಂಗ್ ಸೆಂಟರ್ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 37 ಮಂದಿ ಸಾವನ್ನಪ್ಪಿದ್ದು, 40 ಮಕ್ಕಳು ಸೇರಿದಂತೆ ಒಟ್ಟು 69 ಮಂದಿ ನಾಪತ್ತೆಯಾಗಿರುವುದಾಗಿ ರಷ್ಯಾ ತನಿಖಾ ಸಮಿತಿ ತಿಳಿಸಿದೆ.
ಮಲ್ಟಿಪ್ಲೆಕ್ಸ್ ಸಿನಿಮಾ ಹಾಲ್ ನಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಸಾವಿರಾರು ಸ್ಕ್ವೇರ್ ಮೀಟರ್ ಬೆಂಕಿಗಾಹುತಿಯಾಗಿದೆ. ಸಿನಿಮಾ ಹಾಲ್ ನ ಎರಡು ಮೇಲ್ಚಾವಣಿ ಕುಸಿದು ಬಿದ್ದಿದೆ. ಸುಮಾರು 120 ಮಂದಿಯನ್ನು ಸಿನಿಮಾ ಹಾಲ್ ನಿಂದ ರಕ್ಷಿಸಲಾಗಿದೆ.
ಅತಿ ದೊಡ್ಡ ಶಾಪಿಂಗ್ ಮಾಲ್ ನಲ್ಲಿ ಹಲವು ಮಹಡಿಗಳಿದ್ದು, ಭಾನುವಾರ ಮದ್ಯಾಹ್ನ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಶಾಪಿಂಗ್ ಸೆಂಟರ್ ನಲ್ಲಿ ಅಂದಾಜು ಎಷ್ಟು ಜನರಿದ್ದರು ಎಂಬ ಬಗ್ಗೆ ಮಾಹಿತಿಯಿಲ್ಲ ಎಂದು ರಕ್ಷಣಾ ತಂಡ ತಿಳಿಸಿದೆ.
Comments are closed.