ಅಂತರಾಷ್ಟ್ರೀಯ

ಪಾಕ್​ ಪ್ರಧಾನಿ ಅಬ್ಬಾಸಿಗೆ ಅಮೆರಿಕ ಏರ್​ಪೋರ್ಟ್​ನಲ್ಲಿ ಅಪಮಾನ !

Pinterest LinkedIn Tumblr

ನ್ಯೂಯಾರ್ಕ್: ಪಾಕಿಸ್ತಾನ ಪ್ರಧಾನಿ ಶಾಹಿದ್​ ಖಾನ್​ ಅಬ್ಬಾಸಿ ಅವರು ಅಮೆರಿಕದ ನ್ಯೂಯಾರ್ತ್ ವಿಮಾನ ನಿಲ್ದಾಣದಲ್ಲಿ ಅಪಮಾನಕ್ಕೀಡಾದ ಘಟನೆ ವರದಿಯಾಗಿದೆ.

ಮೂಲಗಳ ಪ್ರಕಾರ ಅಮೆರಿಕಕ್ಕೆ ತೆರಳಿದ್ದ ಅಬ್ಬಾಸಿ ಅವರನ್ನು ನ್ಯೂಯಾರ್ಕ್ ನ ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣದಲ್ಲಿ ಸಾಮಾನ್ಯ ಪ್ರಯಾಣಿಕರಂತೆ ನಡೆಸಿಕೊಂಡಿದ್ದು, ಅವರ ಬ್ಯಾಗ್ ಮತ್ತು ಅವರನ್ನು ತೀವ್ರ ಶೋಧ ನಡೆಸಲಾಗಿದೆ. ಅಮೆರಿಕ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಈ ಪ್ರಮಾದ ಎಸಗಿದ್ದು, ಇದರಿಂದ ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ.

ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವಿಡಿಯೋದಲ್ಲಿ ಶಾಹಿದ್​ ಅಬ್ಬಾಸಿ ಅವರು ತಾವು ಧರಿಸಿದ್ದ ಕೋಟ್​ ಅನ್ನು ತಮ್ಮ ತೋಳ ಮೇಲೆ ಹಾಕಿಕೊಂಡು ಒಂದು ಕೈಯಲ್ಲಿ ಸೂಟ್​ಕೇಸ್​ ಹಿಡಿದು ತಪಾಸಣೆ ನಡೆದ ಬಳಿಕ ಹೊರಬರುತ್ತಿದ್ದಾರೆ.

ಈ ಬಗ್ಗೆ ವರದಿ ಮಾಡಿರುವ ಪಾಕ್​ ಮಾಧ್ಯಮಗಳು ಪ್ರಧಾನಿ ಅಬ್ಬಾಸಿ ಅವರನ್ನು ಅಮೆರಿಕ ಸರ್ಕಾರ ಅವಮಾನಿಸಿದ್ದು, ಅನುಚಿತವಾಗಿ ನಡೆದುಕೊಂಡಿದೆ ಎಂದು ವರದಿ ಬಿತ್ತರಿಸಿವೆ. ಅಮೆರಿಕ ಅಧ್ಯಕ್ಷ ಟ್ರಂಪ್ ಆಡಳಿತವು ಪಾಕಿಸ್ತಾನಿ ಸರ್ಕಾರದ ವ್ಯಕ್ತಿಗಳ ಮೇಲೆ ವೀಸಾ ನಿಷೇಧ ಮತ್ತು ಇತರ ನಿರ್ಬಂಧಗಳನ್ನು ವಿಧಿಸುತ್ತಿದೆ ಎಂದು ವರದಿ ಮಾಡಿವೆ.

ಡೊನಾಲ್ಡ್​ ಟ್ರಂಪ್​ ಅಧ್ಯಕ್ಷರಾಗಿ ಆಯ್ಕೆಯಾದ ನಂತರದ ದಿನಗಳಲ್ಲಿ ಪಾಕಿಸ್ತಾನ ಮತ್ತು ಅಮೆರಿಕ ನಡುವಿನ ಸಂಬಂಧ ಹದಗೆಟ್ಟಿದೆ. ಈ ಹಿಂದೆಯೇ ಪಾಕ್​ ವಿರುದ್ಧ ಟ್ರಂಪ್​ ಗುಡುಗಿದ್ದರು. ಪಾಕ್​ ಉಗ್ರರಿಗೆ ನೆರವು ನೀಡುತ್ತಿದ್ದು, ಅವರಿಗೆ ಸರ್ಕಾರದ ನೆರವನ್ನು ನಿಲ್ಲಿಸುವುದಾಗಿ ಎಚ್ಚರಿಸಿದ್ದರು.

ಪಾಕ್ ಮಾಜಿ ಅಧ್ಯಕ್ಷ ಶರೀಫ್ ಅವರು ಭ್ರಷ್ಟಾಚಾರ ಪ್ರಕರಣ ಸಂಬಂಧ ಪ್ರಧಾನಿ ಹುದ್ದೆ ತೊರೆದ ಬಳಿಕ ಅವರ ಸಹೋದರ ಅಬ್ಬಾಸಿ ಅಧಿಕಾರಕ್ಕೇರಿದ್ದರು.

Comments are closed.