ಕಾಬುಲ್: ಸ್ಥಳೀಯ ಬುಡಕಟ್ಟು ಜನರ ನೆರವಿನೊಂದಿಗೆ ಅಪಹರಣಕ್ಕೆ ಒಳಗಾದ 7 ಮಂದಿ ಭಾರತೀಯ ಎಂಜಿನಿಯರ್‌ಗಳ ಪತ್ತೆಗೆ ಅಫಘಾನಿಸ್ತಾನ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.
ಅಪಹೃತಗೊಂಡ ಭಾರತದ ಕೆಇಸಿ ಇಂಟರ್‌ನ್ಯಾಷನಲ್ ಸಂಸ್ಥೆಯ 7 ಮಂದಿ ಎಂಜಿನಿಯರ್‌ಗಳ ಪತ್ತೆಗೆ ಪೊಲೀಸ್ ಇಲಾಖೆ ಈಗಾಗಲೇ ಅಗತ್ಯ ಕ್ರಮ ಕೈಗೊಂಡಿದ್ದು, ಅಲ್ಲಿನ ಬುಡಕಟ್ಟು ಜನಾಂಗದವರೊಂದಿಗೂ ಚರ್ಚಿಸಲಾಗುತ್ತಿದೆ. ಈ ಮೂಲಕ ಎಂಜಿನಿಯರ್‌ಗಳಿರುವ ಸ್ಥಳವನ್ನು ತಲುಪುವ ಪ್ರಯತ್ನ ಮಾಡಲಾಗುತ್ತಿದೆ. ಚೇಷ್ಮಾ ಇ ಶೇರ್ ಪ್ರದೇಶದಲ್ಲಿ ಪವರ್ ಸಬ್ ಸ್ಟೇಷನ್ ಯೋಜನೆಯ ಸಂಬಂಧ ಕೆಲಸಕ್ಕೆ ಆಗಮಿಸಿದ್ದ ಅವರು ತಾಲಿಬಾನಿ ಉಗ್ರರಿಂದ ಅಪಹರಣಕ್ಕೆ ಒಳಗಾಗಿದ್ದಾರೆ. ಈ ವರೆಗೆ ಯಾವುದೇ ಉಗ್ರ ಸಂಘಟನೆ ಅಪಹರಣದ ಹೊಣೆ ಹೊತ್ತಿಲ್ಲ ಎಂದು ಅಫಘಾನಿಸ್ತಾನ್ ಪೊಲೀಸ್ ಮೂಲಗಳು ಹೇಳಿದೆ.
ಅಫಘಾನಿಸ್ತಾನ ಸರಕಾರದ ಅಧಿಕಾರಿಗಳೆಂದು ಭಾವಿಸಿ, ತಾಲಿಬಾನಿಗಳು ಅಪಹರಣ ಮಾಡಲಾಗಿದ್ದು, ಬಿಡುಗಡೆಗೆ ಅಗತ್ಯವಾದ ಎಲ್ಲ ಕ್ರಮಕೈಗೊಳ್ಳಲಾಗುವುದು ಎಂದು ಮೂಲಗಳು ಹೇಳಿದೆ.
Comments are closed.