ಅಂತರಾಷ್ಟ್ರೀಯ

ನಾಲ್ಕೈದು ತಿಂಗಳಿನಿಂದ ಕೋಮಾಗೆ ಜಾರಿದ್ದ ಯುವತಿ ಹಾಡು ಕೇಳಿ ಎಚ್ಚರ!

Pinterest LinkedIn Tumblr


ಸಂಗೀತದಿಂದ ರೋಗ ಗುಣವಾಗುತ್ತದೆ ಎಂಬ ಮಾತು ಆಗಾಗ ಕೇಳುತ್ತೇವೆ. ಆದರೆ ಬಹುತೇಕ ಸಂದರ್ಭದಲ್ಲಿ ನಂಬಿರುವುದಿಲ್ಲ. ಚೀನಾದಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ. ಕಳೆದ ನಾಲ್ಕೈದು ತಿಂಗಳಿನಿಂದ ಮಿದುಳಿಗೆ ಆಮ್ಲಜನಕದ ಕೊರತೆಯಿಂದಾಗಿ ಕೋಮಾಗೆ ಜಾರಿದ್ದ 24 ವರ್ಷದ ಯುವತಿ, ಇದೀಗ ಚೀನಾದ ಗಾಯಕ ಜೈ ಚೌ ಹಾಡು ಕೇಳಿ ಕೋಮಾದಿಂದ ಹೊರಬಂದಿದ್ದಾಳೆ.

ಆರಂಭ ದಲ್ಲಿ ಯುವತಿಯನ್ನು ಕೋಮಾದಿಂದ ಹೊರತರಲು ಆಸ್ಪತ್ರೆಯ ನರ್ಸ್‌ಗಳು ಏನೇನೋ ಹರಸಾಹಸಗಳನ್ನು ಮಾಡಿದ್ದರು. ಜೋಕ್‌ಗಳನ್ನು ಹೇಳುವುದು ಹಾಗೂ ಪತ್ರಿಕೆಯಲ್ಲಿ ಆಕರ್ಷಕ ಸುದ್ದಿಯನ್ನು ಓದಿ ಹೇಳುವುದನ್ನು ಮಾಡುತ್ತಿದ್ದರು. ನಂತರ ನರ್ಸ್‌, ತನ್ನ ಇಷ್ಟದ ಜೈ ಚೌ ಹಾಡುಗಳನ್ನು ಹೇಳಲು ಆರಂಭಿಸಿದರು. ಆಗ ಹಾಡಿನ ಲಯಕ್ಕೆ ಯುವತಿ ನಿಧಾನವಾಗಿ ಪ್ರತಿಕ್ರಿಯಿಸಲು ಆರಂಭಿಸಿದ್ದಳು. ಕೊನೆಗೆ ಒಂದು ದಿನ ಹಾಡು ಕೇಳುತ್ತಲೇ ಆಕೆಗೆ ಪ್ರಜ್ಞೆ ಬಂದಿತ್ತು. ಈಗ ಕಾಲು ಹಾಗೂ ಕೈಗಳನ್ನು ಆಡಿಸುತ್ತಿದ್ದಾಳೆ. ಇನ್ನಷ್ಟು ಸುಧಾರಿಸಿಕೊಳ್ಳುತ್ತಿದ್ದಾಳೆ. ಆದರೆ ಜೈ ಚೌ ಹಾಡಿದ ರೋಸ್‌ಮೇರಿ ಹಾಡು ಇನ್ನೂ ಹಿನ್ನೆಲೆಯಲ್ಲಿ ಪ್ರಸಾರವಾಗುತ್ತಲೇ ಇದೆ.

Comments are closed.