ಅಂತರಾಷ್ಟ್ರೀಯ

ದಂಪತಿಯ ಸಂಭಾಷಣೆ ಧ್ವನಿಮುದ್ರಿಸಿ ಕಳಿಸುತ್ತಿದ್ದ ಅಮೆಜಾನ್‌ ಅಲೆಕ್ಸಾ ಪವರ್ಡ್‌ ಇಕೊ ಉಪಕರಣ

Pinterest LinkedIn Tumblr


ಅಮೆಜಾನ್‌ ಅಲೆಕ್ಸಾ ಉಪಕರಣದಿಂದ ಎಷ್ಟು ಜನರಿಗೆ ಅನುಕೂಲವಾಗಿದೆಯೋ ಗೊತ್ತಿಲ್ಲ? ಆದರೆ ಇದರಿಂದ ಆಗುವ ಎಡವಟ್ಟುಗಳು ಮಾತ್ರ ಆಗಾಗ ವರದಿಯಾಗತ್ತಲೇ ಇರುತ್ತವೆ. ಒರೆಗಾನ್‌ನ ಪೋರ್ಟ್‌ಲ್ಯಾಂಡ್‌ ದಂಪತಿಯನ್ನು ಅಲೆಕ್ಸಾ ಬೇಸ್ತು ಬೀಳಿಸಿದೆ. ಮನೆಯಲ್ಲಿದ್ದ ಅಮೆಜಾನ್‌ ಅಲೆಕ್ಸಾ ಪವರ್ಡ್‌ ಇಕೊ ಉಪಕರಣ ತನ್ನಿಂತಾನೇ ಮನೆಯಲ್ಲಿ ದಂಪತಿ ನಡೆಸುತ್ತಿದ್ದ ಸಂಭಾಷಣೆಯನ್ನು ಸ್ಪಷ್ಟವಾಗಿ ಧ್ವನಿ ಮುದ್ರಿಸಿ ಗುಟ್ಟಾಗಿ ಅವರ ದೂರವಾಣಿ ಪಟ್ಟಿಯಲ್ಲಿದ್ದ ವ್ಯಕ್ತಿಯೊಬ್ಬರಿಗೆ ರವಾನಿಸುತ್ತಿತ್ತು.

ಈ ಸಂಭಾಷಣೆ ಸ್ವೀಕರಿಸುತ್ತಿದ್ದ ವ್ಯಕ್ತಿ, ಮನೆ ಮಾಲೀಕನ ಸಂಸ್ಥೆಯಲ್ಲಿಯ ಉದ್ಯೋಗಿ. ಅಚಾತುರ್ಯದಿಂದ ಅವರು ಧ್ವನಿಮುದ್ರಣಗಳನ್ನು ಕಳಿಸುತ್ತಿದ್ದಾರೆ ಎಂದೇ ವ್ಯಕ್ತಿ ಮೊದಲಿಗೆ ಭಾವಿಸಿದ್ದರಂತೆ. ಬಳಿಕ ತೀರಾ ವೈಯಕ್ತಿಕ ಸಂಭಾಷಣೆಗಳು ಬರಲಾರಂಭಿಸಿದ ಬಳಿಕ, ಅವರ ಅಲೆಕ್ಸಾ ಹ್ಯಾಕ್‌ ಆಗಿರಬಹುದು ಎಂದು ಭಾವಿಸಿ ಆ ವ್ಯಕ್ತಿ ತನ್ನ ಮಾಲೀಕನಿಗೆ ಕರೆ ಮಾಡಿ, “ನಿಮ್ಮ ಅಲೆಕ್ಸಾವನ್ನು ಯಾರೋ ಹ್ಯಾಕ್‌ ಮಾಡಿದ್ದಾರೆ’ ಎಂದು ಹೇಳಿದರಂತೆ. ಪರಿಶೀಲನೆ ನಡೆಸಿದಾಗ ಅಲೆಕ್ಸಾ ಯಾವ ನಿರ್ದೇಶನವೂ ಇಲ್ಲದೇ ಮನೆಯಲ್ಲಿ ನಡೆವ ಸಂಭಾಷಣೆಗಳನ್ನು ಧ್ವನಿ ಮುದ್ರಿಸಿ ಕಳಿಸಿತ್ತು ಎಂಬ ವಿಷಯ ಗೊತ್ತಾಯಿತಂತೆ.

Comments are closed.