ಅಂತರಾಷ್ಟ್ರೀಯ

ಡೇಟಿಂಗ್​ ವೆಬ್​ಸೈಟ್​ನಲ್ಲಿ ಸಿಕ್ಕ ಮಹಿಳೆಗೆ ಲೈಂಗಿಕ ಕ್ರಿಯೆಗೆ ಒತ್ತಾಯ: ಭಾರತೀಯ ಉದ್ಯಮಿಗೆ 25 ವರ್ಷ ಶಿಕ್ಷೆ

Pinterest LinkedIn Tumblr


ನ್ಯೂಯಾರ್ಕ್​: ಡೇಟಿಂಗ್​ ವೆಬ್​ಸೈಟ್​ನಲ್ಲಿ ಸಿಕ್ಕ ಮಹಿಳೆ ಮೇಲೆ ಲೈಂಗಿಕ ಮತ್ತು ದೈಹಿಕ ದೌರ್ಜನ್ಯ ನಡೆಸಿದ್ದ ಆರೋಪದಡಿ ಭಾರತ ಮೂಲದ ಉದ್ಯಮಿಗೆ ಅಮೆರಿಕದಲ್ಲಿ ಕಠಿಣ ಶಿಕ್ಷೆ ವಿಧಿಸಲಾಗಿದೆ.

2016 ಜೂನ್​ 15ರಂದು ನ್ಯೂಯಾರ್ಕ್​ನ ಟೈಮ್​ ಸ್ಕೈರ್​ನಲ್ಲಿ ತ್ರಿಪಾಠಿ ನಡೆಸಿದ್ದ ದೌರ್ಜನ್ಯದ ಆಧಾರದ ಮೇಲೆ ಆತನಿಗೆ 25 ವರ್ಷ ಸೆರೆವಾಸ ವಿಧಿಸಲಾಗಿದೆ. “ಶುಗರ್​ ಡ್ಯಾಡಿ” ಎಂಬ ಡೇಟಿಂಗ್​ ವೆಬ್​ಸೈಟ್​ ಮೂಲಕ ಪರಿಚಿತಳಾದ 38 ವರ್ಷದ ಮಹಿಳೆಯ ಜತೆ ಡೇಟ್​ಗೆ ತೆರಳಿದ್ದ ತ್ರಿಪಾಠಿ ಆಕೆಯ ಮೇಲೆ ದೌರ್ಜನ್ಯವೆಸಗಿದ್ದ.

ಮದ್ಯ ಸೇವನೆಯ ನಂತರ ತ್ರಿಪಾಠಿ ಮಹಿಳೆಯನ್ನು ಉಡುಗೊರೆ ಕೊಡುವುದಾಗಿ ಹೋಟೆಲ್​ ರೂಂಗೆ ಕರೆದೊಯ್ದು ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದ. ಅದಕ್ಕೆ ಮಹಿಳೆ ಸಹಕರಿಸದೇ ಇದ್ದಾಗ ಆಕೆಯ ಮೇಲೆ ಹಲ್ಲೆ ನಡೆಸಿದ್ದ. ಸುಮಾರು 20 ಬಾರಿ ಆಕೆ ಮುಖಕ್ಕೆ ಗುದ್ದಿದ್ದ. ಹಲ್ಲೆ ವೇಳೆ ನಿನ್ನನ್ನು ನಾನು ಸಾಯಿಸುತ್ತೇನೆ ಎಂದೂ ಹೇಳಿದ್ದಾನೆ.

ಮಹಿಳೆ ಮೇಲೆ ತ್ರಿಪಾಠಿ ಎಷ್ಟರ ಮಟ್ಟಿಗೆ ದೌರ್ಜನ್ಯ ನಡೆಸಿದ್ದ ಎಂದರೆ, ಆಕೆಯ ತುಟಿಗಳು ಸೀಳು ಬಿಟ್ಟಿದ್ದವು, ಹಲ್ಲುಗಳು ಉದುರಿದ್ದವು, ಮೂಗಿನಲ್ಲಿ ರಕ್ತ ಸುರಿಯುತ್ತಿತ್ತು, ಕಣ್ಣಿನ ಕೆಳಗೆ ರಕ್ತ ಹೆಪ್ಪುಗಟ್ಟಿತ್ತು, ಹಲ್ಲೆ ನಡೆದ ಹೊಟೇಲ್​ ಕೊಠಡಿ ಗೋಡೆಗಳು ಹಾಗೂ ಬೆಡ್ ಶೀಟ್​ಗಳು ರಕ್ತಸಿಕ್ತವಾಗಿದ್ದವು ಎಂದು ಘಟನೆ ಕುರಿತು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ನ್ಯಾಯಾಲಯದಲ್ಲಿ ತಿಳಿಸಿದ್ದಾರೆ.

ನಾನು ಎರಡು ಮಕ್ಕಳ ತಂದೆ ಮತ್ತು ನನ್ನ ಬ್ಯಾಂಕ್​ನಲ್ಲಿ 10 ಮಿಲಿಯನ್​ ಡಾಲರ್​ ಇದೆ ಎಂದು ತ್ರಿಪಾಠೀ ಶುಗರ್​ ಡ್ಯಾಡಿ ವೆಬ್​ಸೈಟ್​ನಲ್ಲಿ ಜಾಹೀರಾತು ನೀಡಿದ್ದ. ಕಡಿಮೆ ವಯಸ್ಸಿನ ಹೆಣ್ಣಿಗೆ ಶ್ರೀಮಂತ ವಯಸ್ಸಾದ ಗಂಡಸರ ಜತೆ ಡೇಟಿಂಗ್​ ಹೋಗುವ ವೇದಿಕೆಯನ್ನು ಈ ವೆಬ್​ಸೈಟ್​ ಕಲ್ಪಿಸಿಕೊಟ್ಟಿದೆ.

Comments are closed.