ಅಂತರಾಷ್ಟ್ರೀಯ

ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದಿರುವ 7 ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾ ಮುಸ್ಲಿಮರನ್ನು ವಾಪಸ್ ಕರೆಸಿಕೊಳ್ಳಲು ಸಿದ್ಧ: ಮ್ಯಾನ್ಮಾರ್​

Pinterest LinkedIn Tumblr


ಸಿಂಗಾಪುರ: ದೇಶ ಬಿಟ್ಟು ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದಿರುವ ಸುಮಾರು 7 ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾ ಮುಸ್ಲಿಮರನ್ನು ವಾಪಸ್​ ಕರೆಸಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಮ್ಯಾನ್ಮಾರ್​ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಥೌಂಗ್ ಟುನ್​ ತಿಳಿಸಿದ್ದಾರೆ.

ಶಾಂಘ್ರಿ-ಲಾ ಶೃಂಗದಲ್ಲಿ ಮಾತನಾಡಿದ ಅವರು ಸ್ವ ಇಚ್ಛೆಯಿಂದ ವಾಪಸ್​ ಬರುವುದಾದರೆ ನಾವು ಅವರಿಗೆ ಹಾರ್ದಿಕ ಸ್ವಾಗತ ಕೋರುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಮುಂದಿನ 2 ವರ್ಷಗಳಲ್ಲಿ ರೋಹಿಂಗ್ಯಾ ಮುಸ್ಲಿಮರನ್ನು ವಾಪಸ್​ ಕರೆಸಿಕೊಳ್ಳಲು ಮ್ಯಾನ್ಮಾರ್​ ಮತ್ತು ಬಾಂಗ್ಲಾದೇಶ ಕಳೆದ ಜನವರಿಯಲ್ಲಿ ಒಪ್ಪಿಗೆ ಸೂಚಿಸಿದ್ದವು. ಜತೆಗೆ ಕಳೆದ ಗುರುವಾರ ರೋಹಿಂಗ್ಯಾ ಮುಸ್ಲಿಮರಿಗೆ ತಮ್ಮ ದೇಶದಲ್ಲಿ ನೆಲೆಸಲು ಸುರಕ್ಷಿತ ವಾತಾವರಣ ಕಲ್ಪಿಸುವುದಾಗಿ ಮ್ಯಾನ್ಮಾರ್​ ದೇಶ ವಿಶ್ವಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

2017ರ ಆಗಸ್ಟ್​ನಿಂದ ಸುಮಾರು 7 ಲಕ್ಷ ರೋಹಿಂಗ್ಯಾ ಮುಸ್ಲಿಮರು ಮ್ಯಾನ್ಮಾರ್​ ತೊರೆದು ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದಿದ್ದಾರೆ. ಮ್ಯಾನ್ಮಾರ್​ನಲ್ಲಿ ರೋಹಿಂಗ್ಯಾ ಮುಸ್ಲಿಮರ ಮೇಲೆ ದೊಡ್ಡ ಪ್ರಮಾಣದಲ್ಲಿ ದೌರ್ಜನ್ಯ ನಡೆದಿದೆ ಎಂದು ವಿಶ್ವಸಂಸ್ಥೆ ಮತ್ತು ಇತರ ಸಂಸ್ಥೆಗಳು ತಮ್ಮ ವರದಿಯಲ್ಲಿ ತಿಳಿಸಿದ್ದವು.

Comments are closed.