ಅಂತರಾಷ್ಟ್ರೀಯ

ಪ್ರಿನ್ಸ್ ಹ್ಯಾರಿ ದಂಪತಿಯಿಂದ 63 ಕೋಟಿಯ ಉಡುಗೊರೆ ವಾಪಸ್ಸು!

Pinterest LinkedIn Tumblr


ಲಂಡನ್: ಪ್ರಿನ್ಸ್ ಹ್ಯಾರಿ ಮತ್ತು ನಟಿ ಮೇಘನ್ ಮಾರ್ಕೆಲ್ ದಂಪತಿ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಮದುವೆ ಸಂದರ್ಭದಲ್ಲಿ ನೀಡಲಾಗಿರುವ ಉಡುಗೊರೆಯನ್ನು ಹಿಂತಿರುಗಿಸಲು ಹ್ಯಾರಿ ದಂಪತಿ ನಿರ್ಧರಿಸಿದೆ. ರಾಜಮನೆತನದಲ್ಲಿ ನಡೆಯುವ ಮದುವೆಯಲ್ಲಿ ಯಾವುದೇ ಉಡುಗೊರೆ ಸ್ವೀಕರಿಸುವುದಿಲ್ಲ ಎಂದು ತಿಳಿಸಲಾಗಿತ್ತು. ಆದರೂ ಅನೇಕರು ನವದಂಪತಿಗಳಿಗೆ ಶುಭ ಹಾರೈಸಿ 7 ಮಿಲಿಯನ್ ಪೌಂಡ್ ( 63ಕೋಟಿ.ರೂ) ಮೊತ್ತದ ಉಡುಗೊರೆಯನ್ನು ಕಳುಹಿಸಿದ್ದರು.

ಬ್ರಿಟನ್ ರಾಜಕುಮಾರ ಹ್ಯಾರಿ ಮತ್ತು ಮೇಘನ್ ಮೇ19 ರಂದು ಲಂಡನ್​ನಲ್ಲಿ ವಿವಾಹವಾಗಿದ್ದರು. ಮದುವೆ ಉಡುಗೊರೆಯನ್ನು ಚಾರಿಟಿ ಸಂಸ್ಥೆಗೆ ನೀಡುವಂತೆ ಪ್ರಿನ್ಸ್​ ಹ್ಯಾರಿ ಮುಂಚಿತವಾಗಿ ತಿಳಿಸಿದ್ದರೂ, 7 ಮಿಲಿಯನ್ ಪೌಂಡ್ ಮೊತ್ತದ ಉಡುಗೊರೆ ರಾಜಮನೆತನಕ್ಕೆ ಬಂದು ಸೇರಿದೆ .

ಇದೀಗ ಎಲ್ಲ ಉಡುಗೊರೆಗಳನ್ನು ಹಿಂತಿರುಗಿಸಲು ಮುಂದಾಗಿರುವುದಕ್ಕೆ ರಾಜಮನೆತನದ ನಿಯಮಗಳು ಕಾರಣ ಎನ್ನಲಾಗಿದೆ. ರಾಜ ಕುಟುಂಬದ ನಿಯಮದಂತೆ ಯಾವುದೇ ಕಂಪನಿ ತಮ್ಮ ಉತ್ಪನ್ನಗಳನ್ನು ಮಾರ್ಕೆಟಿಂಗ್ ಮಾಡಲು ರಾಯಲ್ ದಂಪತಿಗಳನ್ನು ಬಳಸಬಾರದು.

ಕೆನ್ಸ್​ಸಿಂಗ್ಟನ್ ಅರಮನೆಯ ನಿಯಮಗಳ ಪ್ರಕಾರ ಯುನೈಟೆಡ್ ಕಿಂಗ್​ಡಮ್​ನಲ್ಲಿ ನೆಲೆಸಿರುವ ಯಾವುದೇ ವ್ಯಕ್ತಿಯಿಂದ ಮತ್ತು ಕಂಪನಿಗಳಿಂದ ಉಡುಗೊರೆಗಳನ್ನು ಸ್ವೀಕರಿಸುವಂತಿಲ್ಲ. ಇದರ ಹೊರತಾಗಿಯೂ ಯಾವುದೇ ಸಂಸ್ಥೆ ಉಡುಗೊರೆ ನೀಡಿದರೆ, ರಾಜಮನೆತನದವರ ಹೆಸರನ್ನು ತನ್ನ ಉತ್ಪನ್ನದ ಜಾಹೀರಾತಿಗೆ ಬಳಸುವಂತಿಲ್ಲ ಎಂದು ವೇಲ್ಸ್​ನ ಆನ್ಲೈನ್​ ವೆಬ್​ಸೈಟ್​ ಒಂದು ವರದಿ ಮಾಡಿದೆ.

Comments are closed.