ಅಂತರಾಷ್ಟ್ರೀಯ

ಸಿಂಗಾಪುರದಲ್ಲಿ ಭೇಟಿಯಾದ ಅಮರಿಕದ ಅಧ್ಯಕ್ಷ ಟ್ರಂಪ್‌ – ಉತ್ತರ ಕೊರಿಯದ ಕಿಮ್‌!

Pinterest LinkedIn Tumblr


ಸಿಂಗಾಪುರ : ಇಂದಿಲ್ಲಿ ನಡೆಯುತ್ತಿರುವ ಅಮೆರಿಕ ಮತ್ತು ಉತ್ತರ ಕೊರಿಯ ಐತಿಹಾಸಿಕ ಶೃಂಗದಲ್ಲಿ ಪಾಲ್ಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಉತ್ತರ ಕೊರಿಯ ನಾಯಕ ಕಿಮ್‌ ಜಾಂಗ್‌ ಉನ್‌ ಅವರು ಅಣ್ವಸ್ತ್ರಗಳಿಗೆ ಸಂಬಂಧಿಸಿದ ತಮ್ಮೊಳಗಿನ ಎಲ್ಲ ಭಿನ್ನಮತಗಳನ್ನು ಕಿರಿದುಗೊಳಿಸಿ ಸಮಗ್ರ ದಾಖಲೆ ಪತ್ರಕ್ಕೆ ಸಹಿ ಹಾಕುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ.

ಉಭಯ ನಾಯಕರು ತಮ್ಮೊಳಗಿನ ಶಂಕೆಗಳು, ಹಿಂಜರಿಕೆಗಳು, ಮತ್ತು ಪರಸ್ಪರ ಅವಿಶ್ವಾಸದ ಎಲ್ಲ ಭಿನ್ನಮತಗಳನ್ನು ಬದಿಗಿರಿಸಿ ಐತಿಹಾಸಿಕ ಶೃಂಗ ನಡೆಯುವ ತಾಣಕ್ಕೆ ಆಗಮಿಸಿ ನೇರ ಮಾತುಕತೆಗೆ ಎದುರು ಬದುರಾಗಿ ಕುಳಿತು ವಿವಾದಗಳನ್ನೆಲ್ಲ ಬಗೆಹರಿಸುವ ಪ್ರಯತ್ನಕ್ಕೆ ಮುಂದಾದರು.

ಟ್ರಂಪ್‌ ಅವರು ಕಿಮ್‌ ಜತೆಗಿನ ಈ ಶೃಂಗದ ಧನಾತ್ಮಕ ಫ‌ಲಶ್ರುತಿಯ ಬಗ್ಗೆ ಪೂರ್ಣ ಆಶಾವಾದಿಯಾಗಿದ್ದರೂ ಅವರ ವಿದೇಶ ಸಚಿವ ಮೈಕ್‌ ಪಾಂಪಿಯೋ ಅವರು ಕಿಮ್‌ ಪ್ರಾಮಾಣಿಕತೆಯ ಬಗ್ಗೆ ಎಚ್ಚರದಿಂದಿರುವಂತೆ ಟ್ರಂಪ್‌ ಗೆ ಮುನ್ಸೂಚನೆ ನೀಡಿದರು.

ಈ ಫ‌ಲಪ್ರದ ಶೃಂಗವನ್ನು ಅನುಸರಿಸಿ ಉತ್ತರ ಕೊರಿಯ ಈಗಿನ್ನು ಅತ್ಯಂತ ತ್ವರಿತವಾಗಿ ನಿಸ್ಸೇನೀಕರಣ ಪ್ರಕ್ರಿಯೆಯನ್ನು ಕೈಗೊಳ್ಳುವುದೆಂಬ ಆಶಯವನ್ನು ವ್ಯಕ್ತಪಡಿಸಿದರು. ಉಭಯ ನಾಯಕರೂ ಈಗಿನ್ನು ಶಾಂತಿ ಮತ್ತು ಕಾನೂನಿನ ಪರಮೋಚ್ಚತೆಯನ್ನು ಕಾಪಿಡಲು ಶ್ರಮಿಸುವರೆಂದು ಶೃಂಗವು ಹಾರೈಸಿತು.

ಟ್ರಂಪ್‌ ಅವರು ಕಿಮ್‌ ಅವರನ್ನು ಅಮೆರಿಕಕ್ಕೆ ಬೇಗನೆ ಭೇಟಿ ನೀಡುವಂತೆ ಆಹ್ವಾನಿಸಿದರು.

ಕಿಮ್‌ ಅವರೊಂದಿಗಿನ ಮಾತುಕತೆಯಿಂದ ವಿಶ್ವವು ಮಹತ್ತರ ಬದಲಾವಣೆಯನ್ನು ಕಾಣಲಿದೆ ಎಂದು ಟ್ರಂಪ್‌ ಹೇಳಿದರು.

Comments are closed.