ಅಂತರಾಷ್ಟ್ರೀಯ

ವಿಶ್ವಹಿಂದು ಪರಿಷದ್‌, ಬಜರಂಗದಳ ಧಾರ್ಮಿಕ ಉಗ್ರ ಸಂಘಟನೆಗಳು: ಅಮೆರಿಕದ ಸಿಐಎ

Pinterest LinkedIn Tumblr


ನ್ಯೂಯಾರ್ಕ್‌: ಅಮೆರಿಕದ ಸಿಐಎ ತನ್ನ ಇತ್ತೀಚಿಗಿನ ವರ್ಲ್ಡ್‌ ಫ್ಯಾಕ್ಟ್‌ ಬುಕ್‌ ಸಂಚಿಕೆಯಲ್ಲಿ ವಿಶ್ವಹಿಂದು ಪರಿಷದ್‌ ಮತ್ತು ಬಜರಂಗದಳವನ್ನು ಧಾರ್ಮಿಕ ಉಗ್ರ ಸಂಘಟನೆಗಳು ಎಂದು ಬಿಂಬಿಸಿದೆ.

ವಿಎಚ್‌ಪಿ ಮತ್ತು ಬಜರಂಗದಳ ರಾಜಕೀಯದಲ್ಲಿ ತೊಡಗುವ ಅಥವಾ ರಾಜಕೀಯ ಒತ್ತಡವನ್ನು ಉಂಟುಮಾಡುವ ಸಂಘಟನೆಗಳು ಆದರೆ ಅದರ ನಾಯಕರು ಶಾಸಕಾಂಗ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಅಮೆರಿಕ ಸರ್ಕಾರದ ಗುಪ್ತಚರ ವಿಭಾಗದ ಸಂಸ್ಥೆಯಾಗಿರುವ ಸಿಐಎ ಹೇಳಿದೆ.

ಆರ್‌ಎಸ್‌ಎಸ್‌ ನ್ನು ರಾಷ್ಟ್ರೀಯತೆ ಬಿಂಬಿಸುವ ಸಂಘಟನೆ ಎಂದಿದೆ, ಆದರೆ ರಾಜಕೀಯ ಒತ್ತಡವನ್ನು ತರುವಲ್ಲಿ ಪಾತ್ರವಹಿಸುತ್ತದೆ ಎಂದು ಬರೆದಿದೆ.

ಹುರಿಯತ್‌ ಕಾನ್ಫರೆನ್ಸ್‌ ಮತ್ತು ಜಮಾತ್‌ ಉಲೆಮಾ -ಇ-ಹಿಂದ್‌ ಕೂಡ ರಾಜಕೀಯ ಒತ್ತಡ ತರುವ ಸಂಘಟನೆಗಳು ಎಂದಿದೆ.

ಹುರಿಯತ್‌ ಕಾನ್ಫರೆನ್ಸ್‌ ಪ್ರತ್ಯೇಕತವಾಗಿ ಸಂಘಟನೆ ಎಂದರೆ, ಜಮಾತನ್ನು ಧಾರ್ಮಿಕ ಸಂಘಟನೆ ಎಂದಿದೆ.

ಸಿಐಎ ಅಮೆರಿಕ ಸರ್ಕಾರಕ್ಕೆ ಒಂದು ದೇಶದ ಬಗ್ಗೆ ಇಲ್ಲ ವಿವಾದದ ಬಗ್ಗೆ ಗುಪ್ತಚರ ಅಥವಾ ವಾಸ್ತವಿಕ ಉಲ್ಲೇಖ ವರದಿಗಳನ್ನು ನೀಡುತ್ತದೆ. ಇತಿಹಾಸ, ಜನತೆ, ಸರ್ಕಾರ, ಆರ್ಥಿಕತೆ, ಶಕ್ತಿ, ಭೌಗೋಳಿಕತೆ, ಸಂವಹನ, ಸಾರಿಗೆ, ಮಿಲಿಟರಿ, ಮತ್ತು ರಾಷ್ಟ್ರವ್ಯಾಪಿ ವಿಷಯಗಳು ವರಿದಿಯಲ್ಲಿರುತ್ತವೆ.

ಸಿಐಎ ವರದಿಗೆ ಹಿಂದೂ ಪರ ಸಂಘಟನೆಗಳಾದ ವಿಎಚ್‌ಪಿ ಮತ್ತು ಬಜರಂಗದಳ ತೀವ್ರ ಆಕ್ರೋಶ ವ್ಯಕ್ತ ಪಡಿಸಿವೆ.

Comments are closed.