ಅಂತರಾಷ್ಟ್ರೀಯ

24 ಹೆಂಡತಿಯರು, 149 ಮಕ್ಕಳ ತಂದೆಗೆ 6 ತಿಂಗಳ ಗೃಹ ಬಂಧನ!

Pinterest LinkedIn Tumblr

ಬಹುಪತ್ನಿತ್ವವನ್ನು ಸಂಪ್ರದಾಯವನ್ನಾಗಿ ಆಚರಿಸುವ ಪದ್ಧತಿ ಬ್ರಿಟನ್‌ನಲ್ಲೂ ಇದೆ ಎಂದರೆ ನೀವು ನಂಬುತ್ತೀರಾ? ಇತ್ತೀಚೆಗಷ್ಟೇ ಬ್ರಿಟಿಷ್‌-ಕೊಲಂಬಿಯಾ ಸುಪ್ರೀಂ ಕೋರ್ಟ್‌ ಬಹುಪತ್ನಿತ್ವ ಪದ್ಧತಿ ಅನುಸರಿಸುತ್ತಿದ್ದ ಬ್ರೇಕ್‌ಅವೇ ಪಂಥಕ್ಕೆ ಸೇರಿದ ಇಬ್ಬರು ಪುರುಷರಿಗೆ ಶಿಕ್ಷೆ ವಿಧಿಸಿದೆ. ವಿಂಟ್ಸನ್‌ ಬ್ಲಾಕ್‌ ಮೋರ್‌ ಎಂಬುವವರಿಗೆ 24 ಪತ್ನಿಯರು ಹಾಗೂ 149 ಮಕ್ಕಳಿರುವುದು ತಿಳಿದು ಬಂದಿದೆ.

ಹಾಗೆಯೇ ಜೇಮ್ಸ್‌ ಓಲರ್‌ ಎಂಬುವವರಿಗೆ ಐವರು ಪತ್ನಿಯಂದಿರಿರುವುದು ಗೊತ್ತಾಗಿದೆ. ಇದಕ್ಕೆ ಕೋರ್ಟ್‌ ನೀಡಿರುವ ಶಿಕ್ಷೆ ಏನು ಗೊತ್ತಾ? ಬ್ಲಾಕ್‌ಮೋರ್‌ಗೆ 6 ತಿಂಗಳು ಗೃಹ ಬಂಧನ ವಿಧಿಸಲಾಗಿದೆ. ಅವರು ಉದ್ಯೋಗಕ್ಕೆ ಮತ್ತು ವೈದ್ಯಕೀಯ ತುರ್ತು ಇದ್ದರೆ ಮಾತ್ರ ಹೊರಗಡೆ ಹೋಗಬಹುದು. ಓಲರ್‌ಗೆ ಇದೇ ಶಿಕ್ಷೆಯನ್ನು 3 ತಿಂಗಳ ಅವಧಿಗೆ ವಿಧಿಸಲಾಗಿದೆ. ಜೊತೆಗೆ ಇಬ್ಬರನ್ನೂ 1 ವರ್ಷಗಳ ಕಾಲ ವೀಕ್ಷಣೆಯಲ್ಲಿ ಇರಿಸಲಾಗಿದೆ.

Comments are closed.