ಅಂತರಾಷ್ಟ್ರೀಯ

ಗ್ಯಾಂಬ್ಲಿಂಗ್ ವೆಬ್ ಸೈಟ್ ಪ್ರಚಾರ; ಖ್ಯಾತ ಮಾಡೆಲ್ ಬಂಧನ

Pinterest LinkedIn Tumblr

ಗ್ಯಾಂಬ್ಲಿಂಗ್ ವೆಬ್ ಸೈಟ್ ಪ್ರಚಾರ ಮಾಡಿದ ಆರೋಪದ ಮೇಲೆ ಖ್ಯಾತ ಮಾಡೆಲ್ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

19 ವರ್ಷದ ಐರಿಶ್ ಮಾಡೆಲ್ ಜೆಸ್ಸಿ ವಾರ್ಡ್ ಬಂಧನಕ್ಕೊಳಗಾಗಿರುವ ಮಾಡೆಲ್. ಥಾಯ್ಲೆಂಡ್ ನಲ್ಲಿ ಗ್ಯಾಂಬ್ಲಿಂಗ್ ವೆಬ್ ಸೈಟ್ ಪ್ರಚಾರ ಮಾಡುವುದು ಅಪರಾಧವಾಗಿದ್ದು ಈ ಹಿನ್ನೆಲೆಯಲ್ಲಿ ಮಾಡೆಲ್ ಗೆ ಒಂದು ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.

ಜೆಸ್ಸಿ ಸೇರಿದಂತೆ ಇತರ 15 ಮಾಡೆಲ್ ಗಳಿಗೂ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ತಾನು ಗ್ಯಾಂಬ್ಲಿಂಗ್ ವೆಬ್ ಸೈಟ್ ಪ್ರಚಾರ ಮಾಡಿರುವುದಾಗಿ ನಟಿ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಗರಿಷ್ಠ ಒಂದು ವರ್ಷ ಜೈಲು ಶಿಕ್ಷೆಗೆ ಮಾಡೆಲ್ ಗುರುಯಾಗುವ ಸಾಧ್ಯತೆ ಇದೆ.

ತನ್ನ ಕೃತ್ಯಕ್ಕೆ ಜೆಸ್ಸಿ ಕ್ಷಮೆಯಾಚಿಸಿದ್ದು ಗ್ಯಾಂಬ್ಲಿಂಗ್ ವೆಬ್ ಸೈಟ್ ಪ್ರಚಾರ ಮಾಡುವುದು ಅಕ್ರಮವೆಂದು ನಾನು ತಿಳಿದಿರಲ್ಲಿಲ್ಲ. ದಯವಿಟ್ಟು ಯಾರು ಈ ಸೈಟ್ ಗಳೊಂದಿಗೆ ತೊಡಗಿಸಿಕೊಳ್ಳಬೇಡಿ ಎಂದು ಜೆಸ್ಸಿ ಹೇಳಿದ್ದಾರೆ.

Comments are closed.