ಅಂತರಾಷ್ಟ್ರೀಯ

ಈಗ ಥರ್ಡ್ ಪಾರ್ಟಿನೂ ನಿಮ್ಮ ಜಿಮೇಲ್ ಓದಬಹುದು!

Pinterest LinkedIn Tumblr


ವಾಷಿಂಗ್ಟನ್: ಸಾಫ್ಟ್ ವೇರ್ ಅಭಿವೃದ್ದಿಪಡಿಸುವ ನೂರಕ್ಕೂ ಹೆಚ್ಚಿನ ಹೊರಗುತ್ತಿಗೆ ಸಂಸ್ಥೆಗಳಿಗೆ ಗೂಗಲ್ ಜಿಮೇಲ್ ಇನ್ ಬಾಕ್ಸ್ ಸ್ಕ್ಯಾನ್ ಮಾಡುವ ಅವಕಾಶವನ್ನು ಸರ್ಚ್ ಇಂಜಿನ್ ಸಂಸ್ಥೆ ಗೂಗಲ್ ನೀಡಿದೆ. ಈ ಹೊರಗುತ್ತಿಗೆ ಸಂಸ್ಥೆಗಳು ಬೇರೆಯವರ ಜಿಮೇಲ್ ಓದುವುದು ಅಷ್ಟೇ ಅಲ್ಲದೆ ತಮ್ಮದೇ ಸಂಸ್ಥೆಯ ಉದ್ಯೋಗಿಗಳ ಮೇಲ್ ಸಹ ಓದುವುದಕ್ಕೆ ಮುಂದಾಗಲಿದೆ.

ಇದೇ ವೇಳೆ ಜಿಮೇಲ್ ಇನ್ ಬಾಕ್ಸ್ ನಲ್ಲಿ ಹೆಚ್ಚಿನ ಜಾಹೀರಾತುಗಳು ಕಂಡುಬರುವುದಾಗಿ ವರದಿಯಾಗಿದ್ದು, ಪ್ರಯಾಣ ದರಗಳು, ಶಾಪಿಂಗ್ ವಿವರಗಳಿರುವ ಬಹುರಾಷ್ಟ್ರೀಯ ಸಂಸ್ಥೆಗಳ ಜಾಹೀರಾತುಗಳು ಜಿಮೇಲ್ ನಲ್ಲಿ ಕಾಣಲಿದೆ. ಜಾಗತಿಕವಾಗಿ ಅತಿ ಹೆಚ್ಚು ಜನರು ಜಿಮೇಲ್ ಅನ್ನು ತಮ್ಮ ಖಾಸಗಿ ಈ ಮೇಲ್ ಆಗಿ ಬಳ್ಸುತ್ತಿದ್ದಾರೆ. ಜಗತ್ತಿನಲ್ಲಿ ಸರಿಸುಮಾರು 1.4 ಕೋಟಿ ಜನ ಜಿಮೇಲ್ ಬಳಕೆದಾರರಿದ್ದಾರೆ ಎಂದು ಅಂದಾಜಿಸಲಾಗಿದೆ.

ಆದರೆ ಗೂಗಲ್ ಹೇಳಿಕೆಯಂತೆ ಕೆಲವೇ ಸಂದರ್ಭಗಳಲ್ಲಿ ಮಾತ್ರ ಹೊರಗುತ್ತಿಗೆ ಸಂಸ್ಥೆಗಳಿಗೆ ಬಳಕೆದಾರರ ಜಿಮೇಲ್ ಓದುವ ಅವಕಾಶವಿದೆ. ಮೇಲ್ ನಲ್ಲಿ ಬಗ್ ಅಥವಾ ತಾಂತ್ರಿಕ ಸಮಸ್ಯೆಗಳು ತಲೆದೋರಿದಾಗ ಮಾತರ ಬಳಕೆದಾರರ ಅನುಮತಿಯ ಮೇರೆಗೆ ಅವರ ಮೇಲ್ ಇನ್ ಬಾಕ್ಸ್ ತೆರೆದು ಓದಲಾಗುತ್ತದೆ. ಇದುವರೆಗೆ ಗೂಗಲ್ ನೌಕರರು ಮಾತ್ರವೇ ಕೆಲವೇ ಸಂದರ್ಭಗಳಲ್ಲಿ ಬಳಕೆದಾರರ ಜಿಮೇಲ್ ಖಾತೆಯನ್ನು ಪ್ರವೇಶಿಸಿ ಮೇಲ್ ಓದುವ ಅವಕಾಶವನ್ನು ಹೊಂದಿದ್ದರು.

Comments are closed.