ಅಂತರಾಷ್ಟ್ರೀಯ

ಅಮೆರಿಕ: McDonald ಸಲಾಡ್‌ ತಿಂದು 163 ಮಂದಿ ಅಸ್ವಸ್ಥ

Pinterest LinkedIn Tumblr


ವಾಷಿಂಗ್ಟನ್‌ : ವಿಶ್ವ ಪ್ರಸಿದ್ಧ ಮೆಕ್‌ಡೊನಾಲ್ಡ್‌ ನ ಅಮೆರಿಕದ ಹತ್ತು ರಾಜ್ಯಗಳಲ್ಲಿ ಹರಡಿಕೊಂಡಿರುವ ರೆಸ್ಟೋರೆಂಟ್‌ಗಳಲ್ಲಿ ಸಲಾಡ್‌ ತಿಂದ ಸುಮಾರು 163 ಮಂದಿ ಅಸ್ವಸ್ಥರಾಗಿದ್ದಾರೆ. ಆದರೆ ಯಾರೂ ಮೃತಪಟ್ಟ ವರದಿಗಳಿಲ್ಲ.

ಘಟನೆಯನ್ನು ಅನುಸರಿಸಿ ಅಮೆರಿಕದ ಆರೋಗ್ಯ ಅಧಿಕಾರಿಗಳು ಮೆಕ್‌ ಡೊನಾಲ್ಡ್‌ ನ ಸಲಾಡ್‌ ತಿಂದವರಲ್ಲಿ ಕಂಡು ಬಂದಿರುವ ಸೈಕ್ಲೋಸ್ಪೋರಿಯಾಸಿಸ್‌ ಎಂಬ ಕಾಯಿಲೆಗೆ ಕಾರಣವಾಗಿರುವ ಯಾವ ವಸ್ತು ಸಲಾಡ್‌ನ‌ಲ್ಲಿದೆ ಎಂಬುದರ ವೈಜ್ಞಾನನಿಕ ಪರೀಕ್ಷೆ ನಡೆಸುತ್ತಿದ್ದಾರೆ. ಅಂತೆಯೇ ಘಟನೆಯ ಬಗ್ಗೆ ಕೂಲಂಕಷ ತನಿಖೆ ಈಗ ಪ್ರಗತಿಯಲ್ಲಿದೆ.

ಈ ವೈಜ್ಞಾನನಿಕ ಪರೀಕ್ಷೆಗೆ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಇಸಿ) ಮತ್ತು ಸ್ವತಃ ಮೆಕ್‌ಡೊನಾಲ್ಡ್‌ ಖಾದ್ಯ ಪರಿಣತರು ನೆರವಾಗುತ್ತಿದ್ದಾರೆ.

ಅಮೆರಿಕದ ಹತ್ತು ರಾಜ್ಯಗಳಲ್ಲಿರುವ ಮೆಕ್‌ಡೊನಾಲ್ಡ್‌ ಸರಣಿ ರೆಸ್ಟೋರಾಂಟ್‌ಗಳಲ್ಲಿ ಗ್ರಾಹಕರಿಗೆ ಲಭ್ಯವಿದ್ದ ಸಲಾಡ್‌ನ‌ಲ್ಲಿ ಇರುವ ಏಕಪ್ರಕಾರದ ರೋಗಕಾರಕ ಅಂಶ ಯಾವುದು ಎಂಬುದೀಗ ಚರ್ಚೆಯ ವಿಷಯವಾಗಿದೆ. ಸಲಾಡ್‌ ತಿಂದ ಅನೇಕರಿಗೆ ಡಯೋರಿಯಾ, ಹಸಿವು ನಷ್ಟ, ತೂಕ ನಷ್ಟ, ವಾಂತಿ, ಬಸವಳಿಕೆ, ತಲೆನೋವು, ಮೈ ಕೈ ನೋವು ಉಂಟಾಗಿದೆ.

ಜುಲೈ 13ರಂದು ಮೆಕ್‌ಡೊನಾಲ್ಡ್‌ ಹೊರಡಿಸಿರುವ ಪ್ರಕಟನೆಯಲ್ಲಿ ತಾನು ಸ್ವಯಂ ಪ್ರೇರಣೆಯಿಂದ ತನ್ನ ಸರಣಿ ರೆಸ್ಟೋರೆಂಟ್‌ಗಳಲ್ಲಿ ಸಲಾಡ್‌ ಮಾರಾಟವನ್ನು ನಿಲ್ಲಿಸಲು ನಿರ್ಧರಿಸಿರುವುದಾಗಿ ಹೇಳಿದೆ.

ಇಲ್ಲಿನಾಯ್ಸ, ಐಯೋವಾ, ಇಂಇಯಾನಾ, ವಿಸ್ಕಾನ್‌ಸಿನ್‌, ಮಿಶಿಗನ್‌, ಒಹಾಯೋ, ಮಿನೆಸೋಟಾ, ನೆಬ್ರಾಸ್ಕಾ, ದಕ್ಷಿಣ ಡಕೋಟ, ಮೋಂಟಾನಾ, ಉತ್ತರ ಡಕೋಟ, ಕೆಂಟುಕಿ, ಪಶ್ಚಿಮ ವರ್ಜಿನಿಯಾ ಮತ್ತು ಮಿಸೋರಿಯಲ್ಲಿನ ರೆಸ್ಟೋರೆಂಟ್‌ಗಳಲ್ಲಿ ಈಗಿನ್ನು ಹೊಸ ಬಗೆಯ ಸಲಾಡ್‌ ಪೂರೈಕೆಗೆ ಸಾಧ್ಯವಾಗುವ ವರೆಗೆ ತಾನು ಈಗಿನ ಸಲಾಡ್‌ ಪೂರೈಸುವುದನ್ನು ನಿಲ್ಲಿಸಿರುವುದಾಗಿ ಮೆಕ್‌ ಡೊನಾಲ್ಡ್‌ ಹೇಳಿದೆ.

ಅಮೆರಿಕದ ಮಧ್ಯ-ಪಶ್ಚಿಮ ಪ್ರದೇಶದಲ್ಲಿ ಮೆಕ್‌ಡೊನಾಲ್ಡ್‌ ನ 3,000 ರೆಸ್ಟೋರಾಂಟ್‌ಗಳಿವೆ.

ಈ ನಡುವೆ ಅಮೆರಿಕದ ಎಫ್ಡಿಐ, ಮೆಕ್‌ಡೊನಾಲ್ಡ್‌ನ ರೋಗಕಾರಕ ಸಲಾಡ್‌ ತಿಂದು ಸೈಕ್ರೋಸ್ಪೋರಿಯಾಸಿಸ್‌ ಕಾಯಿಲೆಯ ಗುಣಲಕ್ಷಣಗಳೊಂದಿಗೆ ಅಸ್ವಸ್ಥರಾದವರು ಒಡನೆಯೇ ಆರೋಗ್ಯ ಸೇವೆ ಪೂರೈಕೆದಾರರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು ಎಂದು ಹೇಳಿದೆ.

Comments are closed.