ಅಂತರಾಷ್ಟ್ರೀಯ

ಭೂಕಂಪನ, ರಕ್ಕಸ ಸುನಾಮಿಗೆ ನಡುಗಿದ ಇಂಡೋನೇಷ್ಯಾ: ಸಾವಿನ ಸಂಖ್ಯೆ 832ಕ್ಕೆ ಏರಿಕೆ, ಹಲವರ ನಾಪತ್ತೆ!

Pinterest LinkedIn Tumblr

ಜಕಾರ್ತ: ಇಂಡೊನೇಷ್ಯಾದ ಸುಲಾವೇಸಿ ದ್ವೀಪದ ಪಲು ನಗರದಲ್ಲಿ ಕಳೆದ ಶುಕ್ರವಾರ ಸಂಭವಿಸಿದ ಪ್ರಬಲ ಭೂಕಂಪನ ಮತ್ತು ಸುನಾಮಿಯ ಹೊಡೆತಕ್ಕೆ ಸಿಲುಕಿ ಸಾವನ್ನಪ್ಪಿರುವವರ ಸಂಖ್ಯೆ ಈ ವರೆಗೂ 832ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದ್ದು, ಭೂಕಂಪನ ಮತ್ತು ಸುನಾಮಿ ಅಲೆಗಳ ಬಳಿಕ ಅವಶೇಷಗಳಡಿಯಲ್ಲಿ ಸಿಕ್ಕ ಶವಗಳ ಸಂಖ್ಯೆ 832ಕ್ಕೆ ಏರಿಕೆಯಾಗಿದೆ. ಅಂತೆಯೇ ಸುನಾಮಿ ಬಳಿಕ ಪಲು ನಗರದಿಂದ ನೂರಾರು ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಕುರಿತು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದೆ.

ಭೂಕಂಪನದಿಂದಾಗಿ ಸುಲಾವೇಸಿ ದ್ವೀಪದ ಹಲವು ನಗರಗಳ ಬೃಹತ್ ಕಟ್ಟಡಗಳು ಕುಸಿದಿದ್ದು, ಪರಿಣಾಮ ಹಲವರು ಸಾವನ್ನಪ್ಪಿದ್ದಾರೆ. ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿ ಹಲವರು ಮೃತಪಟ್ಟರೆ, ಭೂಕಂಪನದ ಬಳಿಕ ದಿಢೀರ್ ಆಗಮಿಸಿದ ರಕ್ಕಸ ಸುನಾಮಿ ಅಲೆಗಳಿಗೆ ಸಿಲುಕಿ ನೂರಾರು ಮಂದಿ ಮೃತಪಟ್ಟಿದ್ದಾರೆ.

ಕಳೆದ ಶುಕ್ರವಾರ ಸುಲಾವೇಸಿ ದ್ವೀಪದಲ್ಲಿ ಸಂಭವಿಸಿದಭೂಕಂಪನ ರಿಕ್ಟರ್‌ ಮಾಪಕದಲ್ಲಿ 7.5ರಷ್ಟು ತೀವ್ರತೆ ದಾಖಲಾಗಿದ್ದು, ಗರಿಷ್ಠ 1.5 ಮೀಟರ್‌ ಎತ್ತರದಷ್ಟು ಸುನಾಮಿ ಅಲೆಗಳು ಎದ್ದಿದ್ದವು. ಬೀಚ್ ನಲ್ಲಿ ಸ್ಥಳೀಯ ಹಬ್ಬವೊಂದು ಇದ್ದಿದ್ದರಿಂದ ಸಾವಿರಾರು ಮಂದಿ ಬೀಚ್ ಬಳಿ ನೆರೆದಿದ್ದರು. ಈ ವೇಳೆ ಸುನಾಮಿ ಸಂಭವಿಸಿದ್ದರಿಂದ ನೂರಾರು ಮಂದಿ ಸುನಾಮಿ ಅಲೆಗಳಿಗೆ ಬಲಿಯಾಗಿದ್ದು, ಹಲವರು ನಾಪತ್ತೆಯಾಗಿದ್ದಾರೆ.

Comments are closed.