ಅಂತರಾಷ್ಟ್ರೀಯ

ಅಂತರಾಷ್ಟ್ರೀಯ ಪೊಲೀಸ್​ ಕಾರ್ಪೊರೇಷನ (ಇಂಟರ್​ಪೋಲ್)​ ಮುಖ್ಯಸ್ಥರೇ ‘ಕಾಣೆ’

Pinterest LinkedIn Tumblr


ಬೀಜಿಂಗ್​: ಪ್ರಪಂಚದ ಯಾವುದೇ ದೇಶ ಕಷ್ಟದಲ್ಲಿದ್ದರೂ ಕೈಹಿಡಿಯುವ ಅಂತರಾಷ್ಟ್ರೀಯ ಪೊಲೀಸ್​ ಕಾರ್ಪೊರೇಷನ್​ (ಇಂಟರ್​ಪೋಲ್​ ) ಈಗ ಸಂಕಷ್ಟದಲ್ಲಿ ಸಿಲುಕಿದೆ. ಫ್ರಾನ್ಸ್​ನಿಂದ ಚೀನಾಗೆ ಹೋಗಿದ್ದ ಇಂಟರ್​ಪೋಲ್​ ಮುಖ್ಯಸ್ಥ ಮೆಂಗ್​ ಹಾಂಗ್​ವೇ ಕಾಣೆಯಾಗಿದ್ದಾರೆ.

ಬೇರೆ ಬೇರೆ ದೇಶಗಳಲ್ಲಿ ಅಪರಾಧ ಕೃತ್ಯಗಳಾದಾಗ ತಕ್ಷಣ ಕಾರ್ಯಪ್ರವೃತ್ತರಾಗಿ ಸಹಾಯ ಮಾಡುವ ಇಂಟರ್​ಪೋಲ್​ನ ಮುಖ್ಯಸ್ಥರೇ ಈಗ ಕಾಣೆಯಾಗಿರುವುದು ಚರ್ಚೆಗೆ ಕಾರಣವಾಗಿದೆ. ಫ್ರಾನ್ಸ್​ ಪೊಲೀಸರು ಇಂಟರ್​ಪೋಲ್​ ಅಧ್ಯಕ್ಷ ಮೆಂಗ್​ ಹಾಂಗ್​ವೇ ಅವರ ಹುಡುಕಾಟಕ್ಕಾಗಿ ವಿಶೇಷ ತಂಡಗಳನ್ನು ರಚನೆ ಮಾಡಿದ್ದಾರೆ. ಮೂಲಗಳ ಪ್ರಕಾರ ಸೆಪ್ಟೆಂಬರ್​ ತಿಂಗಳ ಕೊನೆಯ ವಾರದಲ್ಲಿ ಹಾಂಗ್​ವೇ ನಾಪತ್ತೆಯಾಗಿದ್ದಾರೆ. ಅವರ ಇರುವಿಕೆಯ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಹಾಂಗ್​ವೇ ಹೆಂಡತಿ ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ ಕಾರ್ಯಾಚರಣೆ ಆರಂಭಿಸಲಾಗಿದೆ. ಹಾಂಗ್​ವೇಯಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗದಿದ್ದಾಗ ಹೆಂಡತಿ ಫ್ರಾನ್ಸ್​ನ ಲ್ಯೋನ್​ ನಗರದ ಪೊಲೀಸರಿಗೆ ದೂರು ನೀಡಿದ್ದಾರೆ. ಹಾಂಗ್​ವೇ ಚೀನಾ ಮೂಲದವರಾಗಿದ್ದು ಫ್ರಾನ್ಸ್​ನ ಇಂಟರ್​ಪೋಲ್​ ಪ್ರಧಾನ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ತಮ್ಮ ದೇಶಕ್ಕೆ ತೆರಳುತ್ತೀನಿ ಎಂಬುದಾಗಿ ತಿಳಿಸಿ ಹಾಂಗ್​ವೇ ಹೊರಟಿದ್ದರು. ಫ್ರೆಂಚ್​ ರೇಡಿಯೋ ಯುರೋಪ್​ 1 ಪ್ರಕರಣವನ್ನು ಬೆಳಕಿಗೆ ತಂದಿತ್ತು.

ರುಯ್ಟರ್ಸ್​ ಇಂಟರ್​ಪೋಲ್​ ಸಂಸ್ಥೆಯನ್ನು ಸಂಪರ್ಕಿಸಲು ಪ್ರಯತ್ನಿಸಿತಾದರೂ, ಪ್ರತಿಕ್ರಿಯೆ ಲಭ್ಯವಾಗಲಿಲ್ಲ.

ಇಂಟರ್​ಪೋಲ್​ನ ಬಹುಮುಖ್ಯ ಕೆಲಸವೆಂದರೆ ಬೇರೆ ಬೇರೆ ದೇಶಗಳ ಪೊಲೀಸ್​ ಇಲಾಖೆಗಳಿಗೆ ಆರೋಪಿಗಳ ಪತ್ತೆಗೆ ಸಹಾಯ ಮಾಡುವುದು. ಮೆಂಗ್​ ಹಾಂಗ್​ವೇ ಇಂಟರ್​ಪೋಲ್​ ಅಧ್ಯಕ್ಷ ಸ್ಥಾನಕ್ಕೇರುವ ಮುನ್ನ ಚೀನಾ ದೇಶದ ಹಲವು ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದ್ದರು.

2016ರಲ್ಲಿ ಹಾಂಗ್​ವೇ ಇಂಟರ್​ಪೋಲ್​ನ ಅಧ್ಯಕ್ಷ ಸ್ಥಾನಕ್ಕೇರಿದ್ದರು. ಹಾಂಗ್​ವೇ ಅವರ ಪದವಿಯನ್ನು ಬಳಸಿಕೊಂಡು ದಮನಿತರ ಮೇಲೆ ಹರಿಹಾಯಲು ಚೀನಾ ಮುಂದಾಗಬಹುದು ಎಂದು ಮಾನವ ಹಕ್ಕುಗಳ ಹೋರಾಟಗಾರರು ಆ ಸಂದರ್ಭದಲ್ಲಿ ಆತಂಕ ವ್ಯಕ್ತಪಡಿಸಿದ್ದರು.

ಚೀನಾ ದೇಶ ಹಲವು ವರ್ಷಗಳಿಂದ ವಿದೇಶದಲ್ಲಿರುವ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆಯಲು ಯತ್ನಿಸುತ್ತಿದೆ. ಆದರೆ ಅದಿನ್ನೂ ಸಾಧ್ಯವಾಗಿಲ್ಲ. ರುಯ್ಟರ್ಸ್​ ಚೀನಾದ ವಿದೇಶಾಂಗ ಇಲಾಖೆಯನ್ನು ಸಂಪರ್ಕಿಸಲು ಪ್ರಯತ್ನಿಸಿತಾದರೂ ಸಧ್ಯಕ್ಕೆ ಲಭ್ಯವಾಗಿಲ್ಲ.

Comments are closed.